ದೇಶ

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು

ಕೋಹಿಮ: ನಾಗಾಲ್ಯಾಂಡ್ ರಾಜ್ಯ ಸ್ಥಾನಮಾನವನ್ನು ಪಡೆದ 60 ವರ್ಷಗಳ ನಂತರ ಇಂದು ಮೊದಲ ಬಾರಿ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಿತ್ರಪಕ್ಷವಾದ ಎನ್‌ಡಿಪಿಪಿಯ ಹೆಕಾನಿ ಜಖಾಲು ಅವರು ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿದ್ದಾರೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಒಬ್ಬರು. ಪಶ್ಚಿಮ ಅಂಗಮಿ ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಮತ್ತೊಬ್ಬ ಮಹಿಳಾ ಅಭ್ಯರ್ಥಿ ಸಲ್ಹೌಟುನೊ ಕ್ರೂಸ್ ಮುನ್ನಡೆಯಲ್ಲಿದ್ದಾರೆ. ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ರಾಜ್ಯದಲ್ಲಿ ಮೂರು […]

ನಾಗಾಲ್ಯಾಂಡ್​ನಲ್ಲಿ ಮೊದಲ ಬಾರಿಗೆ ಮಹಿಳಾ ಶಾಸಕಿ ಆಯ್ಕೆ : ಎನ್‌ಡಿಪಿಪಿಯ ಹೆಖಾನಿ ಜಖಾಲು ಅವರಿಗೆ ಐತಿಹಾಸಿಕ ಗೆಲುವು Read More »

ಹಿಂಡೆನ್‌ಬರ್ಗ್‌ ವರದಿಯ ನ್ಯಾಯಾಂಗ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ಅದಾನಿ ಸಮೂಹದ ಕಂಪನಿಗಳು ಷೇರು ವಹಿವಾಟಿನ ತನಿಖೆ ಹೊಸದಿಲ್ಲಿ : ಷೇರು ಮಾರುಕಟ್ಟೆಯಲ್ಲಿ ಗೌತಮ್‌ ಅದಾನಿ ಮಾಲಕತ್ವದ ಕಂಪನಿಗಳ ಸಮೂಹ ಮಾಡಿದೆ ಎನ್ನಲಾಗಿರುವ ಅವ್ಯವಹಾರಗಳ ಮೇಲೆ ಬೆಳಕು ಚೆಲ್ಲಿರುವ ಅಮೆರಿಕದ ಹಿಂಡೆನ್‌ಬರ್ಗ್ ವರದಿಯ ತನಿಖೆಗೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ. ನಿವೃತ್ತ ನ್ಯಾಯಾಧೀಶ ಎ.ಎಂ. ಸಪ್ರೆ ನೇತೃತ್ವದ ಆಯೋಗ ತನಿಖೆ ನಡೆಸಲಿದೆ.ಅದಾನಿ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಕೃತಕವಾಗಿ ತಮ್ಮ ಮೌಲ್ಯ ವೃದ್ಧಿಸಿಕೊಂಡಿವೆ ಎಂಬುದಾಗಿ ಹಿಂಡೆನ್‌ಬರ್ಗ್‌ ತನಿಖಾ ವರದಿ ಪ್ರಕಟಿಸಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿದೆ. ಎಲ್‌ಐಸಿಯಂಥ

ಹಿಂಡೆನ್‌ಬರ್ಗ್‌ ವರದಿಯ ನ್ಯಾಯಾಂಗ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ Read More »

ಕಾಲೇಜಿನಲ್ಲಿ ಮುಷ್ಕರ ಹೂಡಿದರೆ 20 ಸಾವಿರ ರೂ. ದಂಡ

ಜೆಎನ್‌ಯು ವಿವಿಯಲ್ಲಿ ಹೊಸ ನಿಯಮ ಜಾರಿ ಹೊಸದಿಲ್ಲಿ : ವಿದ್ಯಾರ್ಥಿಗಳು ಕ್ಯಾಂಪಸ್‌ ಒಳಗೆ ಧರಣಿ ಮುಷ್ಕರ ನಡೆಸಿದರೆ 20 ರಿಂದ 30 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದೆ.ಕಾಲೇಜಿನ ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳು ಧರಣಿ ಮಾಡಿದರೆ 20 ಸಾವಿರ ರೂ. ಅಥವಾ 30 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಹಿಂಸಾಚಾರದಲ್ಲಿ ಪಾಲ್ಗೊಂಡರೆ ಪ್ರವೇಶ ರದ್ದುಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಜೆಎನ್‌ಯು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸರಿಯಾದ ನಡವಳಿಕೆಯ 10

ಕಾಲೇಜಿನಲ್ಲಿ ಮುಷ್ಕರ ಹೂಡಿದರೆ 20 ಸಾವಿರ ರೂ. ದಂಡ Read More »

ಬ್ಯಾಂಕ್‌ ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ

ಪ್ರಸ್ತಾಪಕ್ಕೆ ತಾತ್ವಿಕ ಒಪ್ಪಿಗೆ-ದಿನದ ಕೆಲಸದ ಅವಧಿ ಹೆಚ್ಚಳ ಹೊಸದಿಲ್ಲಿ : ಖಾಸಗಿ ವಲಯದ ಕಂಪನಿಗಳಲ್ಲಿ ಇರುವ ವಾರಕ್ಕೆ 5 ದಿನ ಕೆಲಸ ನೀತಿ ಶೀಘ್ರವೇ ದೇಶದ ಸರ್ಕಾರಿ ಬ್ಯಾಂಕಿಂಗ್‌ ವಲಯಕ್ಕೂ ಕಾಲಿಡುವ ಸಾಧ್ಯತೆ ಇದೆ. ವಾರಕ್ಕೆ 5 ದಿನ ಕರ್ತವ್ಯದ ನೀತಿ ಜಾರಿ ತರುವಂತೆ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆ ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಎಂಪ್ಲಾಯಿಸ್‌ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಭಾರತೀಯ ಬ್ಯಾಂಕ್ಸ್‌ ಅಸೋಸಿಯೇಷನ್‌ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಈಗಾಗಲೇ ಆಂಶಿಕವಾಗಿ ಬ್ಯಾಂಕ್‌ಗಳಲ್ಲಿ ಈ ಪದ್ಧತಿ ಇದೆ.

ಬ್ಯಾಂಕ್‌ ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ Read More »

ಮಣಿಶಂಕರ್‌ ಅಯ್ಯರ್‌ ಪುತ್ರಿಯ ಎನ್‌ಜಿಒ ಲೈಸೆನ್ಸ್‌ ಕ್ಯಾನ್ಸಲ್‌

ವಿದೇಶಿ ದೇಣಿಗೆ ಸ್ವೀಕಾರ ಕಾಯಿದೆ ಉಲ್ಲಂಘಿಸಿದ ಸಂಸ್ಥೆ ಹೊಸದಿಲ್ಲಿ : ಕಾಂಗ್ರೆಸ್‌ನ ಹಿರಿಯ, ಮಾಜಿ ಸಚಿವ ಮಣಿಶಂಕರ್‌ ಅಯ್ಯರ್‌ ಅವರ ಪುತ್ರಿ ಯಾಮಿನಿ ಅಯ್ಯರ್‌ ಅಧ್ಯಕ್ಷರಾಗಿರುವ ದಿಲ್ಲಿಯ ಸೆಂಟರ್‌ ಫಾರ್‌ ಪಾಲಿಸಿ ರೀಸರ್ಚ್‌ (ಸಿಪಿಆರ್‌) ಎಂಬ ಸರಕಾರೇತರ ಸಂಘಟನೆಯ ವಿದೇಶಿ ದೇಣಿಗೆ ಲೈಸೆನ್ಸನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದೆ.ಯಾವುದೇ ಎನ್‌ಜಿಒ ವಿದೇಶಗಳಿಂದ ದೇಣಿಗೆ ಸಂಗ್ರಹಿಸಬೇಕಾದರೆ ಫಾರಿನ್‌ ಕಾಂಟ್ರಿಬ್ಯೂಷನ್‌ ರೆಗ್ಯುಲೇಷನ್‌ ಆ್ಯಕ್ಟ್ (FCRA) ಅನ್ವಯ ಲೈಸೆನ್ಸ್‌ ಹೊಂದಿರುವುದು ಕಡ್ಡಾಯ. ಈ ಲೈಸೆನ್ಸ್‌ ಅನುಮತಿ ಹೊಂದಿದ್ದ ಸಿಪಿಆರ್‌ (CPR) ಪೋರ್ಡ್‌ ಟ್ರಸ್ಟ್‌,

ಮಣಿಶಂಕರ್‌ ಅಯ್ಯರ್‌ ಪುತ್ರಿಯ ಎನ್‌ಜಿಒ ಲೈಸೆನ್ಸ್‌ ಕ್ಯಾನ್ಸಲ್‌ Read More »

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ

ಕಾಂಗ್ರೆಸ್‌ ಹಿಂದಿಕ್ಕಿದ ಟಿಎಂಸಿ ದ್ವಿತೀಯ ಸ್ಥಾನದಲ್ಲಿ ಹೊಸದಿಲ್ಲಿ : ಬಿಜೆಪಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 1917 ಕೋಟಿ ದೇಣಿಗೆ ಪಡೆದುಕೊಂಡಿದೆ. ಎಂಟು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಿಗೆ ಭಾರತದಾದ್ಯಂತ ಒಟ್ಟು 3289.34 ಕೋಟಿ ರೂ ದೇಣಿಗೆ ಸಂದಾಯವಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಬಿಜೆಪಿಯೊಂದೇ ಪಡೆದುಕೊಂಡಿದೆ. ಬಿಜೆಪಿಯ ಪ್ರಮುಖ ಎದುರಾಳಿಯಾಗಿರುವ ಕಾಂಗ್ರೆಸ್‌ಗೆ ಸಿಕ್ಕಿರುವುದು 541 ಕೋ. ರೂ. ಮಾತ್ರ. ವಿಶೇಷವೆಂದರೆ ಕಾಂಗ್ರೆಸ್‌ಗಿಂತ ಹೆಚ್ಚು ದೇಣಿಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ಗೆ ಹರಿದುಬಂದಿದೆ.ಚುನಾವಣಾ ಸುಧಾರಣೆಗಳಿಗಾಗಿ

ಬಿಜೆಪಿಗೆ ಹರಿದು ಬಂತು 1917 ಕೋ.ರೂ. ದೇಣಿಗೆ Read More »

2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಒಟ್ಟಾಗಿ ಸ್ಪರ್ಧಿಸಬೇಕು : ಎಐಸಿಸಿ ಅಧ್ಯಕ್ಷ

ಚೆನ್ನೈ: ಡಿಎಂಕೆ ಅಧ್ಯಕ್ಷ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಮುಂಬುರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ನೇತೃತ್ವ ಯಾರು ವಹಿಸಲಿದ್ದಾರೆ, ಯಾರು ಪ್ರಧಾನಿ ಆಗಲಿದ್ದಾರೆ ಎಂದು ಹೇಳಿಲ್ಲ. ಬಿಜೆಪಿಯನ್ನು ಸೋಲಿಸುವುದೇ ವಿಪಕ್ಷಗಳ ಮುಖ್ಯ ಗುರಿಯಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಅವರು ಹೇಳಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವು 2004, 2009ರಲ್ಲಿ ಲೋಕಸಭೆ ಚುನಾವಣೆ ಮತ್ತು 2006 ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದೆ. 2024ರ ಲೋಕಸಭೆ

2024ರ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳು ಒಟ್ಟಾಗಿ ಸ್ಪರ್ಧಿಸಬೇಕು : ಎಐಸಿಸಿ ಅಧ್ಯಕ್ಷ Read More »

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ

ನವದೆಹಲಿ : ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದತ್ತ ದೃಢವಾದ ಹೆಜ್ಜೆ ಇರಿಸಲು ಚೀನಾ, ಪಾಕಿಸ್ತಾನ ಗಡಿಗಳಿಗೆ ನಿಯೋಜಿಸಲು ರಕ್ಷಣಾ ಸಚಿವಾಲಯ ಭಾರತೀಯ ಸೇನೆಯಿಂದ 307 ಅತ್ಯಾಧುನಿಕ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್‌ಗಳ ಖರೀದಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆ 1 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಸಂಪುಟ ಸಮಿತಿ ಅನುಮೋದನೆಗೆ ಕಳಿಸಲಾಗಿದೆ. ಇದು ದೇಶಿಯವಾಗಿ ತಯಾರಾಗಲಿರುವ ಹೊವಿಟ್ಜರ್‌ಗಳ ಮೊದಲ ಖರೀದಿಯಾಗಿರಲಿದ್ದು, 50 ಕೀ.ಮೀ ವ್ಯಾಪ್ತಿವರೆಗಿನ ಟಾರ್ಗೆಟ್‌ಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಗನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ಸೇನಾಪಡೆಗಳು

ಭಾರತೀಯ ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್‌ಗಳ ಖರೀದಿ Read More »

ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆ ಮಾಡುತ್ತಿರುವ 71 ವರ್ಷದ ಅಶೋಕ್ ಶರ್ಮಾ ಜಿ.

ಕಾರ್ಕಳದಲ್ಲಿ ಅವರನ್ನು ಸ್ವಾಗತಿಸಿ ಶುಭಹಾರೈಸಿದ ನ್ಯಾಯವಾದಿ ಎಂ. ಕೆ. ವಿಪುಲ್ ಕಾರ್ಕಳ : ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆ ಮಾಡುತ್ತಿರುವ 71 ವರ್ಷದ ಅಶೋಕ್ ಶರ್ಮಾ ಜಿ. ಅವರು ಉಡುಪಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿರುವ ಸಂದರ್ಭ ಕಾರ್ಕಳದಲ್ಲಿ ಮಾ. 1 ರಂದು ನ್ಯಾಯವಾದಿ ಎಂ. ಕೆ. ವಿಪುಲ್‌ ಸ್ವಾಗತಿಸಿ ಶುಭಹಾರೈಸಿದರು. ಅಶೋಕ್ ಶರ್ಮಾ ಜಿ. ಅವರು 2 ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್,

ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆ ಮಾಡುತ್ತಿರುವ 71 ವರ್ಷದ ಅಶೋಕ್ ಶರ್ಮಾ ಜಿ. Read More »

ಅಂಬಾನಿ ಕುಟುಂಬಕ್ಕೆ ಝಡ್‌ ಪ್ಲಸ್‌ ಭದ್ರತೆ : ಸುಪ್ರೀಂ ಆದೇಶ

ವಿದೇಶಗಳಲ್ಲೂ ಭದ್ರತೆ ನೀಡಲು ನಿರ್ದೇಶನ ಹೊಸದಿಲ್ಲಿ: ಉಗ್ರರ ಬೆದರಿಕೆ ಎದುರಿಸುತ್ತಿರುವ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಝಡ್‌ ಪ್ಲಸ್‌ ಭದ್ರತೆ ನೀಡಲು ಸುಪ್ರೀ ಕೋರ್ಟ್‌ ಆದೇಶಿಸಿದೆ. ದೆಶದಲ್ಲಿ ಮಾತ್ರವಲ್ಲದೆ ವಿದೇಶ ಪ್ರವಾಸದ ವೇಳೆಯೂ ಝಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಝಡ್‌ ಪ್ಲಸ್‌ ಭದ್ರತೆಯ ವೆಚ್ಚವನ್ನು ಅಂಬಾನಿಯಿಂದಲೇ ವಸೂಲು ಮಾಡಲು ನ್ಯಾಯಾಲಯ ಹೇಳಿದೆ.ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಈ ಆದೇಶ ನೀಡಿದೆ. ಮುಖೇಶ್ ಅಂಬಾನಿ

ಅಂಬಾನಿ ಕುಟುಂಬಕ್ಕೆ ಝಡ್‌ ಪ್ಲಸ್‌ ಭದ್ರತೆ : ಸುಪ್ರೀಂ ಆದೇಶ Read More »

error: Content is protected !!
Scroll to Top