ಮಣಿಶಂಕರ್‌ ಅಯ್ಯರ್‌ ಪುತ್ರಿಯ ಎನ್‌ಜಿಒ ಲೈಸೆನ್ಸ್‌ ಕ್ಯಾನ್ಸಲ್‌

ವಿದೇಶಿ ದೇಣಿಗೆ ಸ್ವೀಕಾರ ಕಾಯಿದೆ ಉಲ್ಲಂಘಿಸಿದ ಸಂಸ್ಥೆ

ಹೊಸದಿಲ್ಲಿ : ಕಾಂಗ್ರೆಸ್‌ನ ಹಿರಿಯ, ಮಾಜಿ ಸಚಿವ ಮಣಿಶಂಕರ್‌ ಅಯ್ಯರ್‌ ಅವರ ಪುತ್ರಿ ಯಾಮಿನಿ ಅಯ್ಯರ್‌ ಅಧ್ಯಕ್ಷರಾಗಿರುವ ದಿಲ್ಲಿಯ ಸೆಂಟರ್‌ ಫಾರ್‌ ಪಾಲಿಸಿ ರೀಸರ್ಚ್‌ (ಸಿಪಿಆರ್‌) ಎಂಬ ಸರಕಾರೇತರ ಸಂಘಟನೆಯ ವಿದೇಶಿ ದೇಣಿಗೆ ಲೈಸೆನ್ಸನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದೆ.
ಯಾವುದೇ ಎನ್‌ಜಿಒ ವಿದೇಶಗಳಿಂದ ದೇಣಿಗೆ ಸಂಗ್ರಹಿಸಬೇಕಾದರೆ ಫಾರಿನ್‌ ಕಾಂಟ್ರಿಬ್ಯೂಷನ್‌ ರೆಗ್ಯುಲೇಷನ್‌ ಆ್ಯಕ್ಟ್ (FCRA) ಅನ್ವಯ ಲೈಸೆನ್ಸ್‌ ಹೊಂದಿರುವುದು ಕಡ್ಡಾಯ. ಈ ಲೈಸೆನ್ಸ್‌ ಅನುಮತಿ ಹೊಂದಿದ್ದ ಸಿಪಿಆರ್‌ (CPR) ಪೋರ್ಡ್‌ ಟ್ರಸ್ಟ್‌, ಬಿಲ್‌ ಗೇಟ್ಸ್‌ ಆ್ಯಂಡ್‌ ಮಿಲಿಂದಾ ಟ್ರಸ್ಟ್‌, ಪೆನ್ಸಿಲ್ವೇನಿಯಾ ವಿವಿ (Pennsylvania VV), ಡ್ಯೂಕ್‌ ವಿವಿ ಸೇರಿದಂತೆ ಹಲವು ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುತ್ತಿತ್ತು. ಆದರೆ ಇಂಥ ದೇಣಿಗೆ ಸಂಗ್ರಹದಲ್ಲಿ ಲೋಪ ಎಸಗಿದೆ ಎಂಬ ಕಾರಣಕ್ಕಾಗಿ ಕಳೆದ ವರ್ಷವೇ ಸಿಪಿಆರ್‌ ಮತ್ತು ಆಕ್ಸ್‌ಫಾಮ್‌ ಎಂಬ ಎರಡು ಎನ್‌ಜಿಒಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ವೇಳೆ ಸಿಕ್ಕ ಮಾಹಿತಿಯನ್ನು ಆಧರಿಸಿ ಕಳೆದ ಜನವರಿಯಲ್ಲಿ ಆಕ್ಸ್‌ಫಾಮ್‌ ಸಂಸ್ಥೆಯ ಎಫ್‌ಸಿಆರ್‌ಎ ಲೈಸೆನ್ಸ್‌ ಅಮಾನತು ಮಾಡಲಾಗಿತ್ತು. ಇದೀಗ ಅದೇ ರೀತಿಯ ಶಿಸ್ತು ಕ್ರಮವನ್ನು ಸಿಪಿಆರ್‌ ವಿರುದ್ಧವೂ ಕೈಗೊಳ್ಳಲಾಗಿದೆ. ಹೀಗಾಗಿ ಈ ಸಂಸ್ಥೆ ಇನ್ನು ವಿದೇಶದಿಂದ ದೇಣಿಗೆ ಸ್ವೀಕರಿಸುವುದು ಸಾಧ್ಯವಿಲ್ಲ. ಸಿಪಿಆರ್‌ 1973ರಿಂದಲೂ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಘಟನೆಯಾಗಿದ್ದು, ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಸ್ಕಾಲರ್‌ಶಿಪ್‌, ಉತ್ತಮ ನೀತಿಗಳ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದೆ. ಇದರ ಜತೆಗೆ ಕಾಂಗ್ರೆಸ್‌ಗೆ ಸೈದ್ಧಾಂತಿಕ ವಿಚಾರಗಳಲ್ಲಿ ನೆರವಾಗುತ್ತಿದೆ.















































































error: Content is protected !!
Scroll to Top