ಪಾಲಕ್ ಸೊಪ್ಪಿನ ಆರೋಗ್ಯ ಲಾಭಗಳು

ಆಯುರ್ವೇದದಲ್ಲಿ ಪಾಲಕ್‌ ಸೊಪ್ಪಿನ ಹಲವಾರು ಆರೋಗ್ಯ ಲಾಭಗಳನ್ನು ತಿಳಿಸಲಾಗಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಪಾಲಕ್‌ ವಿಟಮಿನ್ ಎ.ಸಿ ಮತ್ತು ಕೆ ಮತ್ತು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದೆ.

ಪಾಲಕ್‌ನ ಆಯುರ್ವೇದ ಗುಣಲಕ್ಷಣಗಳು
ರುಚಿಯಲ್ಲಿ ಸಿಹಿ ಹಾಗೂ ಕಹಿಯಳ್ಳದ್ದಾಗಿದೆ. ರೂಕ್ಷ ಗುಣ ಹೊಂದಿದೆ. ಸ್ವಭಾವದಲ್ಲಿ ಶೀತವೀರ್ಯ ಹೊಂದಿದೆ. ಪಿತ್ತವನ್ನು ಸಮತೋಲನಗೊಳಿಸುತ್ತದೆ. ವಾತ ಹಾಗೂ ಕಫವನ್ನು ವೃದ್ಧಿಸುತ್ತದೆ. ಬೇಗ ಜೀರ್ಣವಾಗುವುದಿಲ್ಲ.
ತಂಪಾಗಿಸುತ್ತದೆ, ಪೋಷಣೆ ನೀಡುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ.

ಪ್ರಯೋಜನಗಳು
ಜೀರ್ಣಕಾರಿ – ಪಾಲಕ್ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಅದರ ಹೆಚ್ಚಿನ ಫೈಬರ್ ಅಂಶ ಇರುವ ಕಾರಣ ಮಲಬದ್ಧತೆಯನ್ನು ನಿವಾರಿಸುತ್ತದೆ.
ರಕ್ತವನ್ನು ಶುದ್ಧೀಕರಿಸುತ್ತದೆ, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಮೂತ್ರ ಕಲ್ಲನ್ನು ನಿವಾರಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.
ಕಣ್ಣಿನ ಆರೋಗ್ಯಕೆ ಒಳ್ಳೆಯದು. ವಯಸ್ಸಿಗೆ ಸಂಬಂಧಿಸಿದ ದೃಷ್ಟಿ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶದ ರೋಗದಲ್ಲಿ ಉಪಯೋಗಿಸುತ್ತಾರೆ.
ಮೊಡವೆ ಮತ್ತು ಎಸ್ಜಿಮಾದಂತಹ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಉರಿಯೂತ ನಿವಾರಣೆಗೆ ಸಹಾಯ ಮಾಡುತ್ತದೆ.
ಮಧುಮೇಹ ಮತ್ತು ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡಬಹುದು.
ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ವಿಟಮಿನ್ ಎ ಮತ್ತು ಸಿ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ.
ಕೂದಲಿನ ಬೆಳವಣಿಗೆ ಒಳ್ಳೆಯದು. ಅದರಲ್ಲಿರುವ ಕಬ್ಬಿಣ ಮತ್ತು ಫೋಲೇಟ್ ಕೂದಲಿನ ಆರೋಗ್ಯವನ್ನು ಬೆಂಬಲಿಸುತ್ತದೆ.

ಆಹಾರದಲ್ಲಿ ಪಾಲಕ್ ಅನ್ನು ಹೇಗೆ ಸೇರಿಸುವುದು
ಬೇಯಿಸಿದ ಪಾಲಕ್ ಅನ್ನು ಊಟಕ್ಕೆ ಸೇರಿಸಿ, ಹಸಿ ಪಾಲಕ್ ಸೇವಿಸಬಹುದು. ಪಾಲಕ್ ಸೊಪ್ಪನ್ನು ಸರಿಯಾಗಿ ತೊಳೆದು ಬಿಸಿನೀರಿನಲ್ಲಿ ಹಾಕಿ ತೆಗೆಯಿರಿ. ಹೆಚ್ಚು ಹೊತ್ತು ಬೇಯಿಸುವುದು ಬೇಡ. ತುಪ್ಪದಲ್ಲಿ ಕೂಡ ಹುರಿಯಬಹುದು
ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಜೀರಿಗೆ, ಕೊತ್ತಂಬರಿ ಮತ್ತು ಅರಿಶಿನದಂತಹ ಮಸಾಲೆಗಳೊಂದಿಗೆ ಸೇರಿಸಿ.
ಪೋಷಕಾಂಶ ವರ್ಧನೆಗಾಗಿ ಪಾಲಕ್ ಸೂಪನ್ನು ಮಾಡಿ ಸೇವಿಸಬಹುದು. ಪಾಲಕ್ ಜ್ಯೂಸ್ ಮಾಡಿಕೊಡಿಯಬಹುದು. ಪಾಲಕನ್ನು ಸಲಾಡಲ್ಲಿ ಕೂಡ ಬೆರೆಸಬಹುದು.
ದಾಲ್ ಪಾಲಕ್, ಪಾಲಕ್ ಪನೀರ್, ಪಾಲಕ್‌ ತಂಬಳಿ ಮಾಡಿ ಸೇವಿಸಿ. ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೆ ಅದರ ನೈಸರ್ಗಿಕ ಪರಿಮಳವನ್ನು ಇರಿಸಿ ಆರೋಗ್ಯಕರ ಅಡುಗೆಗಳನ್ನು ಮಾಡಿ ಸೇವಿಸಿ.









error: Content is protected !!
Scroll to Top