ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : 41 ಸಾಧಕರಿಗೆ 7 ಸಂಸ್ಥೆಗೆ ಪ್ರಶಸ್ತಿ

ಕಾರ್ಕಳ : 2024 ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅ. 31ರಂದು ಅಧಿಕೃತವಾಗಿ ಪ್ರಕಟಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು 41 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ 7 ಸಂಸ್ಥೆಗೆ ಪ್ರಶಸ್ತಿ ಒಲಿದಿದೆ. ಕಾರ್ಕಳ ಹೆಬ್ರಿ ಉಭಯ ತಾಲೂಕಿನ 8 ಮಂದಿಗೆ ಹಾಗೂ ಒಂದು ಸಂಸ್ಥೆಗೆ ಪ್ರಶಸ್ತಿ ಘೋಷಣೆಯಾಗಿದೆ.

ಕಾರ್ಕಳ
ಸಂಕೀರ್ಣ ಕ್ಷೇತ್ರದ ಸಾಧನೆಗಾಗಿ ಸುಬ್ರಮಣ್ಯ ಬೈಪಾಡಿತ್ತಾಯ ನಂದಳಿಕೆ, ಸಂಗೀತ ಕ್ಷೇತ್ರದ (ಸ್ಯಾಕ್ಸೋಫೋನ್‌ ಕಲಾವಿದ) ಸೂಡ ಗ್ರಾಮದ ಸುನಿಲ್‌ ದೇವಾಡಿಗ, ರಂಗಭೂಮಿ/ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಾ ಗ್ರಾಮದ ಹರೀಶ್‌ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ನಂದಳಿಕೆಯ ಸಚಿತ್‌ ಪೂಜಾರಿ, ಭೂತರಾಧನೆಯಲ್ಲಿ ಕುಕ್ಕುಂದೂರು ಗ್ರಾಮದ ಸಂಜೀವ ಪರವ, ರಂಗಭೂಮಿಯಲ್ಲಿ ಜೋಡುರಸ್ತೆಯ ಹರೀಶ್‌, ಸಂಘಸಂಸ್ಥೆಯಲ್ಲಿ ವಿಜಯ ಯುವಕ ಸಂಘ ಹಾಗೂ ಖುಷಿ ಮಹಿಳಾ ಮಂಡಲಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಹೆಬ್ರಿ
ಸಮಾಜ ಸೇವೆಗಾಗಿ ನವಗ್ರಾಮದ ಎಚ್‌. ಜನಾರ್ಧನ್‌ ಹಾಗೂ ದೈವರಾಧನೆಗಾಗಿ ಸಂತೋಷ್‌ ಕುಮಾರ್‌ ಆರ್ಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ನ. 1ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ
ನ. 1ರಂದು ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರ್ಯಕ್ರಮ ಉದ್ಘಾಟಿಸಲಿರುವರು. ಉಡುಪಿ ಕ್ಷೇತ್ರದ ಶಾಸಕ ಯಶ್‌ಪಾಲ್‌ ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಉಪಸ್ಥಿತರಿರುವರು











































error: Content is protected !!
Scroll to Top