ಬೇಟೆಯಾಡಲು ಬಂದ ಮೂವರು ಸೆರೆ

ಕಾರ್ಕಳ : ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ವನ್ಯಜೀವಿ ವಲಯದ ಅಂಡಾರು ಮೀಸಲು ಅರಣ್ಯ ವ್ಯಾಪ್ತಿಯ ಕೆರ್ವಾಶೆ ಗ್ರಾಮದ ನಲ್ಪಡು ಎಂಬಲ್ಲಿ ಪ್ರಾಣಿ ಬೇಟೆಯಾಡಲು ಕೋವಿ ಜೊತೆ ಬಂದಿದ್ದ ಮೂವರನ್ನು ಕಾರ್ಕಳ ವನ್ಯಜೀವಿ ವಲಯದ ಸಿಬ್ಬಂದಿಯವರು ಬಂಧಿಸಿದ್ದು ಇನ್ನೊರ್ವ ತಪ್ಪಿಸಿಕೊಂಡಿದ್ದಾನೆ. ಅ. 30ರಂದು ರಾತ್ರಿ ಶಿರ್ಲಾಲು ಗ್ರಾಮದ ವಸಂತ ಪೂಜಾರಿ, ರಾಕೇಶ್, ಜಯ ಪೂಜಾರಿ ಹಾಗೂ ಸಂತೋಷ್ ಪೂಜಾರಿ ಎಂಬವರು ಕೋವಿ ಜತೆಗೆ ಬೇಟೆಯಾಡಲು ತೆರಳಿದ್ದರು. ಈ ಪೈಕಿ ಮೂವರು ಸಿಕ್ಕಿ ಬಿದ್ದಿದ್ದು, ಸಂತೋಷ್ ಪೂಜಾರಿ ತಪ್ಪಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಲಯದಲ್ಲಿ ಹಾಜರುಪಡಿಸಿದ ಬಳಿಕ ಹಿರಿಯಡ್ಕ ಜೈಲಿನಲ್ಲಿರಿಸಲಾಗಿದೆ. ಶಸ್ತ್ರಾಸ್ತ್ರ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಅವರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಿ. ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಶಶಿಧರ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದು ಪ್ರಕರಣದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ರಾಜು ಎಲ್. ಜೇ. ಹಾಗೂ ಅಭಿಲಾಶ್, ಗಸ್ತು ಅರಣ್ಯ ಪಾಲಕರಾದ ಮಲ್ಲಯ್ಯ ಎ ಮಠಪತಿ ಯಮನೂರು, ಅರಣ್ಯ ವೀಕ್ಷಕರಾದ ಸುಜೀತ್ ದಾಮೋದರ, ಸಂತೋಷ್ ಹಾಗೂ ವಾಹನ ಚಾಲಕ ನಿತಿನ್ ಜೇ. ಹೆಗ್ಡೆ ಪಾಲ್ಗೊಂಡಿದ್ದರು.









































error: Content is protected !!
Scroll to Top