ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಜಪಾನ್ ನ ನಿಡ್ಯಾಕ್- ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್ ಆಫ್ ಎಕ್ಸಲೆನ್ಸ್ ನ್ನು ಸ್ಥಾಪಿಸಿದೆ. ಈ ಸೆಂಟರನ್ನು ಅ. 18ರಂದು ಬೆಳಗ್ಗೆ 10:30 ಗಂಟೆಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ ನಿಡ್ಯಾಕ್-ರೀಡ್ ಸಂಸ್ಥೆಯ ನಿರ್ದೇಶಕ ಹಾಗೂ ಸಿ.ಇ.ಒ ಹಿಡೆಕಾಜು ಯಮಜಕಿ, ಉಪ ನಿರ್ದೇಶಕ ತಕಶಿ ಮಿಕಿ, ಬೋರ್ಡ್ ಟೆಸ್ಟ್ ವಿಭಾಗದ ವ್ಯವಸ್ಥಾಪಕ ತದಕಜು ಮಿಯಟಕೆ ಹಾಗೂ ಹ್ಯೂಮನ್ ರಿಸೋರ್ಸ್ ವಿಭಾಗದ ಗ್ರೂಪ್ ಲೀಡ್ ಕತ್ಸುಮಿ ಕಸನೊ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ನಿಟ್ಟೆ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್‌ಗಳಾದ ಪ್ರೊ. ಡಾ. ಶಾಂತರಾಮ್ ಶೆಟ್ಟಿ, ವಿಶಾಲ್ ಹೆಗ್ಡೆ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹಾಗೂ ಪ್ರೊ- ವೈಸ್ ಚಾನ್ಸಲರ್ ಡಾ. ಎಂ.ಎಸ್. ಮೂಡಿತ್ತಾಯ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ನಿಡ್ಯಾಕ್-ರೀಡ್ ಕಂಪೆನಿಯು ಮಾಪನ ಹಾಗೂ ತಪಾಸಣಾ ಉಪಕರಣಗಳನ್ನು ತಯಾರಿಸುವ ಹೆಸರುವಾಸಿ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯೊಂದಿಗೆ ನಿಟ್ಟೆ ತಾಂತ್ರಿಕ ಕಾಲೇಜು 2020 ನೇ ಇಸವಿಯಿಂದ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶವನ್ನು ನೀಡುವ ಮೂಲಕ ಸಹಕರಿಸುತ್ತಿದೆ. ಈ ಸೆಂಟರ್ ಆಫ್ ಎಕ್ಸಲೆನ್ಸ್ ನ ಪ್ರಥಮ ಯೋಜನೆಯಡಿಯಲ್ಲಿ ಸಾಫ್ಟ್ ವೇರ್ ಡೆವಲಪ್ಮೆಂಟ್ ಹಾಗೂ ಮೆಕ್ಯಾನಿಕಲ್ ಡಿಸೈನ್ಸ್ ನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


































































