ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಪಿ.ವಿ. ಸಿಂಧು : ಭಾರತದ ಖಾತೆಯಲ್ಲಿ 56 ಪದಕ

ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರ ಪದಕ ಬೇಟೆ ಮುಂದುವರೆದಿದ್ದು ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಕೆನಡಾ ಆಟಗಾರ್ತಿ ಮಿಚೆಲ್ ಲೀ ವಿರುದ್ಧ 21-15, 21-13 ಅಂತರದ ಸೆಟ್‌ಗಳಿಂದ ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಸಿಂಧು ಇದುವರೆಗೆ ಭಾರತದ ಸಿಂಗಲ್ಸ್ ನಲ್ಲಿ ಹೆಚ್ಚು ಸಾಧನೆ ಮಾಡಿರುವ ಆಟಗಾರ್ತಿಯಾಗಿದ್ದು, ಫೈನಲ್‌ನಲ್ಲಿ ಕೆನಡಾದ ಎದುರಾಳಿಯ ವಿರುದ್ಧ ಸ್ವಲ್ಪ ಕಷ್ಟಪಟ್ಟರು. ಮೊದಲ ಗೇಮ್‌ನಲ್ಲಿ ಮಿಚೆಲ್ ನೆಟ್‌ನ ಹತ್ತಿರ ಆಡುವ ಮೂಲಕ ಪಾಯಿಂಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಸಿಂಧು ಹೆಚ್ಚು ಆಕ್ರಮಣಕಾರಿ ಆಟವಾಡಿದರು. ವಿರಾಮದ ನಂತರ ಸಿಂಧು ಮೂರು ನೇರ ಅಂಕಗಳನ್ನು ಪಡೆದು ಅಂತಿಮವಾಗಿ ಗೆಲುವು ದಾಖಲಿಸಿದರು. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 56 ಪದಕಗಳು ಬಂದಿದ್ದು 19 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು ಸೇರಿದೆ.





























































































































































































































error: Content is protected !!
Scroll to Top