ಆಗುಂಬೆ ಘಾಟಿ ರಸ್ತೆ ಬಿರುಕು, ಮತ್ತೆ ಕುಸಿಯುವ ಭೀತಿ

ಹೆಬ್ರಿ : ಆಗುಂಬೆ ಘಾಟಿಯ 3ನೇ ಸುತ್ತಿನ ರಸ್ತೆಯಲ್ಲಿ ಬಿರುಕು ಕಂಡಿದ್ದು ಕುಸಿಯುವ ಭೀತಿ ಉಂಟಾಗಿದೆ. ಜು.16 ರಂದು 17ಸೆ.ಮೀ ಮಳೆಯಾಗಿದ್ದು, ಘಾಟಿಯ ಪ್ರತಿ ಸುತ್ತಿನಲ್ಲೂ ತಡೆಗೋಡೆಯ ಬದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಬಿರುಕು ಕಾಣುತ್ತಿದೆ ಎನ್ನಲಾಗಿದೆ. ಇದೇ ರೀತಿ ಮಳೆಯು ಮುಂದುವರೆದರೆ ನೀರು ಹರಿದು ರಸ್ತೆ ಕುಸಿಯಬಹುದು. ಕಳೆದ ಒಂದು ವಾರದಿಂದ ಬಸ್‌ ಸಂಚಾರ ಸ್ಥಗಿತಗೊಂಡಿದ್ದು ಶಿವಮೊಗ್ಗ, ಚಿಕ್ಕಮಗಳೂರಿನಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರಿಗೆ ಸಮಸ್ಯೆಯಾಗಿದೆ. ಈಗಾಗಲೇ 4ನೇ ಸುತ್ತಿನಲ್ಲಿ ಭೂಕುಸಿತವಾಗಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದು, 3ನೇ ಸುತ್ತಿನಲ್ಲೂ ಮಳೆಯಿಂದಾಗಿ ಬಿರುಕು ಕಂಡಿದೆ. ಶೃಂಗೇರಿ ತಾಲೂಕಿನ ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿಯ ನೇರಳೆ ಕೂಡಿಗೆ ಬಳಿ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಆ.10ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಬದಲು ಶೃಂಗೇರಿ-ಕಿಗ್ಗಾ-ಬೇಗಾರು ಮಾರ್ಗದಲ್ಲಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಕೆ. ಎನ್.‌ ರಮೇಶ್‌ ಆದೇಶಿಸಿದ್ದಾರೆ.





























































































































































































































error: Content is protected !!
Scroll to Top