ಕಾರ್ಕಳ ಎಸ್. ವಿ.ಟಿ ಪದವಿ ಕಾಲೇಜು : ಇಂಟರ್ಯಾಕ್ಟ್ ಸಂಸ್ಥೆಯ ಪದಗ್ರಹಣ

ಕಾರ್ಕಳ : ರೋಟರಿ ಸಂಸ್ಥೆ ಕಾರ್ಕಳ ವತಿಯಿಂದ ಎಸ್. ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಇಂಟರ್ಯಾಕ್ಟ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ ನಡೆಯಿತು.
2021-22 ಸಾಲಿನ ಇಂಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷೆಯಾಗಿ ಕು.ಅಂಜಲಿ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿ, ತಮ್ಮ ನೂತನ ತಂಡವನ್ನು ಪರಿಚಯಿಸಿ, ಅವರ ತಂಡದ ಗುರಿ ಮತ್ತು ಉದ್ದೇಶವನ್ನು ತಿಳಿಸಿದರು.

ಇಂಟರ್ಯಾಕ್ಟ್ ಕ್ಲಬ್ ನ ಉಪಾಧ್ಯಕ್ಷೆಯಾಗಿ ಕು. ಸಾಕ್ಷಿ ನಾಯ್ಕ್ , ಕಾರ್ಯದರ್ಶಿಯಾಗಿ ಕು. ವೈಷ್ಣವಿ , ಜೊತೆ ಕಾರ್ಯದರ್ಶಿಯಾಗಿ ಕು. ಪ್ರತೀಕ್ಷಾ , ಕೋಶಾಧಿಕಾರಿಯಾಗಿ ಕು.ಅಭಿನವಿ , ದಂಡಪಾಣಿಯಾಗಿ ಕು. ಸೌಮ್ಯ ,
ಸಮುದಾಯ ಸೇವಾ ಪ್ರತಿನಿಧಿಯಾಗಿ ಮಾ. ನಿಖಿಲ್ , ಅಂತರ್ರಾಷ್ಟ್ರೀಯ ಸೇವಾ ಪ್ರತಿನಿಧಿಯಾಗಿ ಮಾ. ಪವನ್, ಕ್ರೀಡಾ ಕಾರ್ಯದರ್ಶಿಯಾಗಿ ಕು.ದೀಪ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕು.ಪ್ರಕೃತಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ಕಾರ್ಕಳ ರೋಟರಿ ಮಾತೃ ಸಂಸ್ಥೆಯ ಅಧ್ಯಕ್ಷ ರೊ. ಸುರೇಶ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ನೂತನ ತಂಡಕ್ಕೆ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು.
ಇಂಟರ್ಯಾಕ್ಟ್ ಚೇರ್ಮನ್ ರೊ. ಹರ್ಷಿಣಿ ವಿಜಯರಾಜ್ ಶೆಟ್ಟಿ ಯವರು ಇಂಟರ್ಯಾಕ್ಟ್ ಸಂಸ್ಥೆಯ ಬಗ್ಗೆ ವಿವರವನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ರೊ.ಸುವರ್ಣಾ ನಾಯಕ್, ಪ್ರಾಚಾರ್ಯ ರಾಮದಾಸ್ ಪ್ರಭು, ಮುಖ್ಯಶಿಕ್ಷಕ ಯೋಗೇಂದ್ರ ನಾಯಕ್ ಹಾಗೂ ರೋಟರಿಯ ಕಾರ್ಯದರ್ಶಿ ರೊ.ಇಕ್ಬಾಲ್ ಅಹ್ಮದ್ ಶುಭ ಹಾರೈಸಿದರು.

ಇಂಟರ್ಯಾಕ್ಟ್ ಸಂಯೋಜಕ ಮಾರ್ಗದರ್ಶಕರಾದ ದೇವದಾಸ್ ಸ್ವಾಗತಿಸಿದರು. ಇಂಟರ್ಯಾಕ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕು.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಇಂಟರ್ಯಾಕ್ಟ್ ಕಾರ್ಯದರ್ಶಿ ಕು.ವೈಷ್ಣವಿ ವಂದಿಸಿದರು.





























































































































































































































error: Content is protected !!
Scroll to Top