ಆಟಿಯ ಆಹಾರ ಪದ್ಧತಿಯಿಂದ ಆರೋಗ್ಯ ವೃದ್ಧಿ : ಸುನಿಲ್ ಕುಮಾರ್

0

ಕಾರ್ಕಳ : ಆಟಿ ತಿಂಗಳಿನ ವಿಶೇಷವಾಗಿ ಮಾಡಲ್ಪಡುವ ತಿಂಡಿ ತಿನಿಸುಗಳಲ್ಲಿ ಆಯುರ್ವೇದ ಔಷಧೀಯ ಗುಣವಿದೆ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವುದು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಆ. 14ರಂದು ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಏರ್ಪಡಿಸಲಾದ ಆಟಿ ತಿಂಗಳ ತಿನಿಸುಗಳ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕರು, ಪೂರ್ವಜರು ಸಾಂಪ್ರಾದಾಯಿಕವಾಗಿ ಮಾಡಿಕೊಂಡು ಬಂದಿರುವ ವಿಶೇಷ ಖಾದ್ಯಗಳ ಕುರಿತು ಇಂದಿನ ಜನಾಂಗಕ್ಕೆ ತಿಳಿಸಿಕೊಡು ಕಾರ್ಯವಾಗಬೇಕು. ಇಂತಹ ತಿಂಡಿ ತಿನಿಸುಗಳು ಆರೋಗ್ಯ ಪೂರ್ಣವೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ,  ಆಧುನಿಕ ಆಹಾರ ಪದ್ಧತಿಗಳಿಂದ ರೋಗ ರುಜಿನಗಳು ಹೆಚ್ಚಾಗುತ್ತಿದೆ. ಆದ್ದರಿಂದ ನಾವು ಪುರಾತನ ಆಹಾರ ಪದ್ಧತಿಗೆ ಮೊರೆ ಹೋಗುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೆಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್, ರೇಶ್ಮಾ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್, ಕಾರ್ಯದರ್ಶಿ ವಿದ್ಯಾ ಪೈ, ಪ್ರಮುಖರಾದ ಅಂತೋನಿ ಡಿಸೋಜಾ, ಬಿಜೆಪಿ ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಸವಿತಾ ಕೋಟ್ಯಾನ್, ದಿವ್ಯಶ್ರೀ ಅಮೀನ್, ಮಲ್ಲಿಕಾ ರಾವ್, ಶೋಭಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.‌ ತಾಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಯ ಡಿ. ಬಂಗೇರ ಸ್ವಾಗತಿಸಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಗಳನ್ನಾಡಿದರು. ಉಪಾಧ್ಯಕ್ಷೆ ಜ್ಯೋತಿ ರಮೇಶ್ ನಿರೂಪಿಸಿ, ಬೆಳ್ಮಣ್ ಶಕ್ತಿಕೇಂದ್ರದ ಅಧ್ಯಕ್ಷೆ ಮಂಜುಳಾ ಶೆಟ್ಟಿ ವಂದಿಸಿದರು.

ಆಟಿ ಅಡುಗೆಯ ಸ್ಪರ್ಧೆಗಳ ಪಲಿತಾಂಶ
ಪ್ರಥಮ : ವಿಣಾ ಎಸ್. ಶೆಟ್ಟಿ ವರಂಗ, ದ್ವಿತೀಯ : ಮಾನಸ ಮಿಯ್ಯಾರು ಮತ್ತು ಸುಧಾ ಹರೀಶ್ ಬಜಗೋಳಿ, ತೃತೀಯ: ನಿರ್ಮಲಾ ಮಿಯ್ಯಾರು ಮತ್ತು ವೀಣಾ ಶೆಟ್ಟಿ ವರಂಗ.

Previous articleಕ್ರಿಯೇಟಿವ್‌ ಪಿಯು ಕಾಲೇಜು : ಪ್ರಥಮ ಪಿಯುಸಿಗೆ ದಾಖಲಾತಿ ಆರಂಭ
Next articleಪರಪ್ಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಪುಸ್ತಕ ವಿತರಣೆ

LEAVE A REPLY

Please enter your comment!
Please enter your name here