ವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

ಕಾರ್ಕಳ, ಆ.15 : ವಿಜೇತ ವಸತಿಯುತ ವಿಶೇಷ ಶಾಲೆ, ಅಯ್ಯಪ್ಪನಗರ, ದುರ್ಗಾ ಹೈಸ್ಕೂಲ್ ಶಾಲಾ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಾಜಿ ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ರಾಜ್ಯ ವಕ್ತಾರ ಕ್ಯಾ.ಗಣೇಶ್‍ ಕಾರ್ಣಿಕ್‍ ಅವರು ನೆರವೇರಿಸಿದರು.ಈ ಸಂದರ್ಭದಲ್ಲಿ ಜಾಗೃತಿ ಫೌಂಡೇಶನ್‍ ಅಧ್ಯಕ್ಷ ಆನಂದ್ ನಾಯಕ್, ವಿಜೇತ ಶಾಲಾ ಅಧ್ಯಕ್ಷ ರತ್ನಾಕರ್‍ ಅಮೀನ್, ಟ್ರಸ್ಟಿ ಸಿಯಾ ಸಂತೋಷ್ ನಾಯಕ್, ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಟ್ರಸ್ಟಿ ಕಿರಣ್ ಶೆಟ್ಟಿ, ಉದ್ಯಮಿ ಪ್ರಭಂಜನ್ ಶೆಟ್ಟಿ ಹಾಗೂ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಪಾಲಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಕ್ರೆಯ ವೈದ್ಯೆ ಡಾ.ಪ್ರತೀಕ್ಷಾ ಶೆಟ್ಟಿಯವರು ಪಾಲಕರಿಗೆ ಕೊರೊನಾ ಜಾಗೃತಿ ಕುರಿತಾದ ಮಾಹಿತಿಯನ್ನು ನೀಡಿದರು.

ಡಾ. ಕಾಂತಿ ಹರೀಶ್‍ ಪ್ರಸ್ತಾವಿಕವಾಗಿ ಮಾತನಾಡಿದರು, ಶಾಲಾ ಶಿಕ್ಷಕಿ ಕು. ಹರ್ಷಿತಾ ಡಿ. ಹೆಗ್ಡೆ ಸ್ವಾಗತಿಸಿ, ಸಿಬ್ಬಂದಿ ಜ್ಯೋತಿ ರಮೇಶ್‍ ವಂದಿಸಿದರು.---
Previous articleಕ್ರೈಸ್ಟ್‌ಕಿಂಗ್‌ ಶಾಲೆಯಲ್ಲಿ 74ನೇ ಸ್ವಾತಂತ್ರೋತ್ಸವ
Next articleಸರಕಾರಿ ನೌಕರರ ಸಂಘದ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ  

LEAVE A REPLY

Please enter your comment!
Please enter your name here