ಕ್ರೈಸ್ಟ್‌ಕಿಂಗ್‌ ಶಾಲೆಯಲ್ಲಿ 74ನೇ ಸ್ವಾತಂತ್ರೋತ್ಸವ

0
christ king

ಕಾರ್ಕಳ : ಕ್ರೈಸ್ಟ್‌ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಅವೆಲಿನ್ ಲೂಯಿಸ್ ಧ್ವಜಾರೋಹಣ ನೆರವೇರಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಶೇಡಿಕಜೆ ಸ್ವಾತಂತ್ರ ದಿನಾಚರಣೆ  ಸಂದೇಶ ನೀಡಿದರು. ಪ್ರಾಥಮಿಕ ಶಾಲಾ ಸಹಶಿಕ್ಷಕಿ ಜಯಲಕ್ಷ್ಮಿ ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಮೇರಿಯನ್ ಡಿ’ಸೋಜಾ, ಆಡಳಿತಾಧಿಕಾರಿ ಕೆವಿನ್ ಡಿ’ಮೆಲ್ಲೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ  ಶಿಲ್ಪಾ ಪ್ರಶಾಂತ್ (ಪ್ರೌಢಶಾಲಾ ವಿಭಾಗ), ಕವಿತಾ ಪಾಯಸ್(ಪ್ರಾಥಮಿಕ ವಿಭಾಗ), ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಪ್ರಕಾಶ್ ಭಟ್ ಸ್ವಾಗತಿಸಿ, ವಿನಯಾ ಕಾರ್ಯಕ್ರಮ ನಿರೂಪಿಸಿದರು. ವೀಣಾ ಜೆನಿಟಾ ಮೋನಿಸ್ ವಂದಿಸಿದರು.---
Previous articleಹೆಣ್ಣು ಮಕ್ಕಳ ಮದುವೆ ವಯಸ್ಸು ಬದಲಾಗುತ್ತಾ?
Next articleವಿಜೇತ ವಸತಿಯುತ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

LEAVE A REPLY

Please enter your comment!
Please enter your name here