ಹೆಬ್ರಿ: ಅನಾಥ, ಗೋಗ್ರಾಸ, ಸೇನಾ ನಿಧಿ ಸ್ಥಾಪನೆ

0

ಹೆಬ್ರಿ,ಆ. 13 : ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ನೀಡುವ ಮಹತ್ವದ ಉದ್ದೇಶದಿಂದ ಅನಾಥ, ಗೋಗ್ರಾಸ, ಸೇನಾ ನಿಧಿಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ಸಮಾಜಮುಖಿ ಸೇವೆಯನ್ನು ಮಾಡಬೇಕೆಂಬ ಹಂಬಲ ನಮಗಿದೆ ಎಂದು ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಡಾ. ಭಾರ್ಗವಿ ಐತಾಳ್‌ ಹೇಳಿದರು.

ಅವರು ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಮೂಲಕ ಹೆಬ್ರಿಯ ಉಷಾ ಮೆಡಿಕಲ್ ಮತ್ತು ಹೆಬ್ರಿಯ ರಾಘವೇಂದ್ರ ಜನರಲ್‌ ಆಸ್ಪತ್ರೆಯಲ್ಲಿ ಗುರುವಾರ ಸ್ಥಾಪಿಸಿದ ಅನಾಥ, ಗೋಗ್ರಾಸ ಮತ್ತು ಸೇನಾ ನಿಧಿಗೆ  ಚಾಲನೆ ನೀಡಿ ಮಾತನಾಡಿದರು.

ಹೆಬ್ರಿ ಲಯನ್ಸ್‌ ಕ್ಲಬ್‌ ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು ಕಳೆದ ಹಲವು ವರ್ಷಗಳಿಂದ ಸೇನಾ ನಿಧಿಗೆ ದೇಣಿಗೆ ನೀಡುತ್ತಿರುವುದಕ್ಕೆ ಡಾ.ಭಾರ್ಗವಿ ಐತಾಳ್‌ ಅಭಿನಂದಿಸಿದರು. ಹುಟ್ಟುಹಬ್ಬ, ವೈವಾಹಿಕ ದಿನಾಚರಣೆಯಂತಹ ಶುಭದಿನಗಳನ್ನು ನಾವು ಇಂತಹ ನಿಧಿಗೆ ಧನ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬುದು ನಮ್ಮ ಕಲ್ಪನೆ, ಎಲ್ಲರಿಗೂ ಇದು ಪ್ರೇರಣೆಯಾಗಿ ಸೇವಾ ಮನೋಭಾವ ಮೂಡಲಿ ಎಂದು ನನ್ನ ತಂದೆಯ ಹುಟ್ಟುಹಬ್ಬದ ದಿನ 3 ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಸ್ಥಾಪಕ ಅಧ್ಯಕ್ಷ ಎಚ್. ದಿನಕರ ಪ್ರಭು ಹೇಳಿದರು. ಲಯನ್ಸ್‌ ಕ್ಲಬ್‌ ಸಂಪುಟ ಕಾರ್ಯದರ್ಶಿ ಟಿ.ಜಿ. ಆಚಾರ್ಯ, ಕ್ಲಬ್‌ ಕಾರ್ಯದರ್ಶಿ ಕಬ್ಬಿನಾಲೆ ರಾಮಚಂದ್ರ ಭಟ್‌, ಪೂರ್ವಾಧ್ಯಕ್ಷರಾದ ವಕೀಲ ಕೃಷ್ಣ ಶೆಟ್ಟಿ, ಎಚ್.ರಮೇಶ್‌ ಆಚಾರ್ಯ, ಬೇಳಂಜೆ ಹರೀಶ ಪೂಜಾರಿ, ಹೆಬ್ರಿ ರಾಘವೇಂದ್ರ ಜನರಲ್‌ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರಾಮಚಂದ್ರ ಐತಾಳ್‌, ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ನ  ಮಹಾಬಲ ಶೆಟ್ಟಿ, ಸುಜಾತ ಹರೀಶ ಪೂಜಾರಿ, ಸ್ನೇಹಲತಾ ಟಿ.ಜಿ, ಲಿಯೋ ಅಧ್ಯಕ್ಷ  ನಿರೀಕ್ಷಿತ್‌, ವೈದ್ಯೆ  ಡಾ.ಸುಷ್ಮಾ ಆರ್.ಹೆಗ್ಡೆ ಉಪಸ್ಥಿತರಿದ್ದರು.---
Previous articleಸತತ 4ನೇ ದಿನ ಚಿನ್ನದ ಬೆಲೆ ಇಳಿಕೆ:7 ವರ್ಷಗಳ ದಾಖಲೆ  ಕುಸಿತ
Next articleಮುಂಬಯಿ ನೋಡುವ ಸಲುವಾಗಿ ಹೆತ್ತ ಮಗುವನ್ನೇ ಮಾರಿದಳು ತಾಯಿ!

LEAVE A REPLY

Please enter your comment!
Please enter your name here