ಮುಂಬಯಿ ನೋಡುವ ಸಲುವಾಗಿ ಹೆತ್ತ ಮಗುವನ್ನೇ ಮಾರಿದಳು ತಾಯಿ!

0

ಹೈದರಾಬಾದ್‌, ಆ. 13: ತಮ್ಮ ಕನಸನ್ನು ನನಸು  ಮಾಡಿಕೊಳ್ಳಲು ಜನರು ಏನೇನೊ ಸಾಹಸಗಳನ್ನು ಮಾಡುತ್ತಾರೆ, ಪಡಬಾರದ ಕಷ್ಟ ಪಡುತ್ತಾರೆ. ಆದರೆ ಈ ಮಹಾತಾಯಿಯೊಬ್ಬಳು ಮುಂಬಯಿ ನೋಡಬೇಕೆಂಬ ಕನಸು ನನಸು ಮಾಡಿಕೊಳ್ಳಲು ಆರಿಸಿದ ದಾರಿಯನ್ನು ನೋಡಿದರೆ ನೀವು ಆಶ್ಚರ್ಯಚಕಿತರಾಗುವುದು ಖಚಿತ. ತನ್ನ 2 ತಿಂಗಳು   ಪ್ರಾಯದ ಗಂಡು ಮಗುವನ್ನೇ ಮಾರಿದ್ದಾಳೆ ಈಕೆ.

ಹೈದರಾಬಾದಿನ ಹಬೀಬ್‌ನಗರದಲ್ಲಿ ನಡೆದಿರುವ ಘಟನೆಯಿದು. ಶೇಕ್‌ ಝೋಯಾ ಖಾನ್‌ ಎಂಬ  22 ವರ್ಷದ ಮಹಿಳೆ ಕ್ಷುಲ್ಲಕ ಕಾರಣಕ್ಕೆ ಗಂಡನ  ಜೊತೆಗೆ ಜಗಳವಾಡಿ ಕೆಲವು ದಿನಗಳಿಂದ ಒಂಟಿಯಾಗಿ ವಾಸಿಸುತ್ತಿದ್ದಳು. ಝೋಯಾಳಿಗೆ ಬದುಕಿನಲ್ಲಿದ್ದ ಆಸೆ ಒಂದೇ, ಒಮ್ಮೆಯಾದರೂ ಮುಂಬಯಿ ನಗರವನ್ನು ನೋಡಬೇಕೆಂದು.

ಆದರೆ ಮುಂಬಯಿಗೆ ಹೋಗಿ ಬರುವಷ್ಟು ದುಡ್ಡು  ಅವಳ ಬಳಿ ಇರಲಿಲ್ಲ. ಆಗ  ಅವಳ ಕಣ್ಣು   ಬಿದ್ದದ್ದು 2 ತಿಂಗಳ ಮಗುವಿನ ಮೇಲೆ. ಗಂಡನ ಸಹಕಾರವಿಲ್ಲದೆ ಮಗುವನ್ನು ಸಾಕಲೂ ಕಷ್ಟವಾಗುತ್ತಿದೆ ಎಂದು ಯೋಚಿಸಿದ ಝೋಯಾ ಮಗುವನ್ನೇ ಮಾರಾಟಕ್ಕಿಟ್ಟಲು. ಓರ್ವ ದಲ್ಲಾಳಿ ಬಂದು ವ್ಯವಹಾರ ಕುದುರಿಸಿಯೂ ಬಿಟ್ಟ. 45,000 ರೂ. ಪಡೆದುಕೊಂಡು ಝೋಯಾ ಮಗುವನ್ನು ಮಾರಿಬಿಟ್ಟಲು.

ಆದರೆ ಅದು ಹೇಗೋ ಝೋಯಾಳ ಗಂಡ ಅಬ್ದುಲ್‌ ಮಜಾಹಿದ್‌ಗೆ ಹೆಂಡತಿ ಮಗುವನ್ನು ಮಾರಾಟ ಮಾಡಿದ ವಿಚಾರ ತಿಳಿಯಿತು. ಮುಜಾಹಿದ್‌ ನೀಡಿದ ದೂರಿನಂತೆ ಪೊಲೀಸರು 24 ತಾಸುಗಳ ಒಳಗೆ ಮಗು ಖರೀದಿಸಿದವರನ್ನು ಪತ್ತೆ ಹಚ್ಚಿ ಮಗುವನ್ನು ತಂದೆಯ ವಶಕ್ಕೆ ಒಪ್ಪಿಸಿದ್ದಾರೆ.ಝೋಯಾ, ವ್ಯವಹಾರ ಕುದುರಿಸಿದ  ದಲ್ಲಾಳಿ ಮತ್ತು ಮಗು ಖರೀದಿಸಿವರು ಸೇರಿ ಐವರು ಈಗ ಕಂಬಿ ಎಣಿಸುತ್ತಿದ್ದಾರೆ.

 

 

 ---
Previous articleಹೆಬ್ರಿ: ಅನಾಥ, ಗೋಗ್ರಾಸ, ಸೇನಾ ನಿಧಿ ಸ್ಥಾಪನೆ
Next articleಯಕ್ಷಗಾನ ಕಲಾರಂಗ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

LEAVE A REPLY

Please enter your comment!
Please enter your name here