ಯಕ್ಷಗಾನ ಕಲಾರಂಗ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

0

ಉಡುಪಿ,ಆ. 13 : ಜಿಲ್ಲೆಯ ಎಸ್. ಎಸ್. ಎಲ್. ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಸರಕಾರಿ‌ ಹಾಗೂ ಅನುದಾನಿತ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ  ಯಕ್ಷಗಾನ ಕಲಾರಂಗ ವಿದ್ಯಾರ್ಥಿ ವೇತನ ನೀಡುತ್ತಿದೆ. ಯಕ್ಷಗಾನ ಕಲಾರಂಗದ ವಿದ್ಯಾಪೋಷಕ ನಿಧಿಯಿಂದ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ಇದಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿಗಳು ಶಾಲಾ ಮುಖ್ಯೋಪಾಧ್ಯಾಯರಿಂದ ಅಥವಾ ಉಡುಪಿ‌ಯ ಯಕ್ಷಗಾನ ಕಲಾರಂಗದ ಕಚೇರಿಯಿಂದ ಅರ್ಜಿಯನ್ನು ಪಡೆದು ಭರ್ತಿಗೊಳಿಸಿ ಆಗಸ್ಟ್ 20, 2020ರೊಳಗೆ ವಿದ್ಯಾಪೋಷಕ್, ಯಕ್ಷಗಾನ ಕಲಾರಂಗ (ರಿ.) ಉಡುಪಿ-576101
ಈ ವಿಳಾಸಕ್ಕೆ ಕಳುಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಕೆ.ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

 ---
Previous articleಮುಂಬಯಿ ನೋಡುವ ಸಲುವಾಗಿ ಹೆತ್ತ ಮಗುವನ್ನೇ ಮಾರಿದಳು ತಾಯಿ!
Next articleಸೆಪ್ಟೆಂಬರ್ ನಲ್ಲಿ ಶಾಲಾರಂಭ ಅಸಂಭವ : ಸುರೇಶ್‌ ಕುಮಾರ್‌  

LEAVE A REPLY

Please enter your comment!
Please enter your name here