ರಫೇಲ್‌ ಪೈಲಟ್ ಗಳಲ್ಲಿದ್ದಾರೆ ಓರ್ವ ಕನ್ನಡಿಗ

0

ಬೆಂಗಳೂರು , ಜು.29: ಇಂದು ಅಂಬಾಲ  ವಾಯುನೆಲೆಗೆ ಆಗಮಿಸಿರುವ ಐದು ರಫೇಲ್‌ ಯುದ್ಧ ವಿಮಾನಗಳ  ಪೈಕಿ ಒಂದಕ್ಕೆ ಪೈಲಟ್‌ ಆಗಿದ್ದವರು ಕರ್ನಾಟಕದ ಯೋಧ.

 ಫ್ರಾನ್ಸ್ ನಿಂದ 7,000 ಕಿ.ಮೀ. ಪ್ರಯಾಣಿಸಿ ಐದು ರಫೇಲ್‌ ಗಳು ಇಂದು  ಅಂಬಾಲದಲ್ಲಿ ಯಶಸ್ವಿಯಾಗಿ ಲ್ಯಾಂಡ್‌ ಆಗಿವೆ. ಈ  ಪೈಕಿ ಒಂದು ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದು ಓರ್ವ  ಹೆಮ್ಮೆಯ ಕನ್ನಡಿಗ. 

ಐದು ಯುದ್ಧ ವಿಮಾನಗಳ ಪೈಲಟ್ ಗಳ ತಂಡದಲ್ಲಿ ಕರ್ನಾಟಕ ಮೂಲದ ಓರ್ವ ಪೈಲಟ್ ಕೂಡ ಇದ್ದಾರೆ. ಕರ್ನಾಟಕದ ವಿಜಯಪುರ ಮೂಲದ ಸೈನಿಕರೊಬ್ಬರು ಭಾರತಕ್ಕೆ ರಫೇಲ್ ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದಾರೆ. 

ವಿಜಯಪುರ ಸೈನಿಕ ಶಾಲೆಯಲ್ಲಿ ಅಭ್ಯಾಸ ಪಡೆದ 35 ವರ್ಷದ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್ ಅವರೇ ಈ ಹೆಮ್ಮೆಯ ಕನ್ನಡಿಗ. . ನ್ಯಾಷನಲ್ ಡಿಫೆನ್ಸ್ ಆರ್ಮಿಗೆ ಸೇರ್ಪಡೆಯಾಗಿ ಈಗ ದೇಶ ಸೇವೆ ಸಲ್ಲಿಸುತ್ತಿದ್ದಾರೆ. 

ಅರುಣ್ ಕುಮಾರ್ ಅವರ ತಂದೆ ಎನ್. ಪ್ರಸಾದ್‌ ಸಹ ಏರ್‌ ಫೋರಾ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು.

Previous articleಅಂಬಾಲದಲ್ಲಿ ರಫೇಲ್‌ ಲ್ಯಾಂಡ್‌
Next articleಅಗರಿಯವರ ಒಂದು ಹಾಡಿನ ಕುರಿತು…

LEAVE A REPLY

Please enter your comment!
Please enter your name here