ಕಾರ್ಕಳ : 2026-27 ಸಾಲಿನ ರೋಟರಿ ಆ್ಯನ್ಸ್ ಕ್ಲಬ್ ನೂತನ ಅಧ್ಯಕ್ಷೆಯಾಗಿ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯಾಗಿ ವಕೀಲೆ ಸವಿತಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಜು. 29ರಂದು ರೋಟರಿ ಬಾಲಭವನದಲ್ಲಿ ಪದಪ್ರದಾನ ಸಮಾರಂಭ ನಡೆಯಿತು. ಜತೆ ಕಾರ್ಯದರ್ಶಿಯಾಗಿ ಅನಿತ ಡಿʼಸಿಲ್ವ, ಕೋಶಾಧಿಕಾರಿಯಾಗಿ ಟೆಲ್ಮ ಪಿಂಟೊ, ಜತೆ ಕೋಶಾಧಿಕಾರಿಯಾಗಿ ಸಹನ ಭಟ್ ಅಧಿಕಾರ ಸ್ವೀಕರಿಸಿದರು. ಗೀತಾ ಕಾಮತ್ ಆ್ಯನ್ಸ್ ಕ್ಲಬ್‌ನ ಚೇರ್‌ಮೆನ್ ಆಗಿ ಆಯ್ಕೆಯಾಗಿರುತ್ತಾರೆ. ರೋಟರಿ ಅಧ್ಯಕ್ಷ ವಿಜೇಂದ್ರ ಕುಮಾರ್ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರೋಟರಿ ಆ್ಯನ್ಸ್ ಕ್ಲಬ್ ನೂತನ ಅಧ್ಯಕ್ಷೆಯಾಗಿ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ – ಕಾರ್ಯದರ್ಶಿಯಾಗಿ ಸವಿತಾ ಹೆಗ್ಡೆ














