ಮೌಲ್ಯಸುಧಾ : ಸುವರ್ಣ ಮಾಲಿಕೆ ಸಂಭ್ರಮ – ಸನಾತನ ರಾಷ್ಟ್ರಾಂಜಲಿ ಪ್ರಸ್ತುತಿ

ಕಾರ್ಕಳ : ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯವನ್ನು ನೀಡುವ ಮೌಲ್ಯಸುಧಾ ಸರಣಿ ಮಾಲಿಕೆ ಸುವರ್ಣ ಸಂಚಿಕೆಯ ಮೂಲಕ ದಾಪುಗಾಲಿಟ್ಟಿರುವುದು ಜ್ಞಾನಸುಧಾದ ಬದ್ಧತೆಗೆ ಸಾಕ್ಷಿಯಾಗಿದೆ. ಇಲ್ಲಿ ಸಿಗುವ ಎಲ್ಲಾ ಜ್ಞಾನವನ್ನು ಸಂಪಾದಿಸಿಕೊಂಡು ಉತ್ತಮ ನಾಗರಿಕರಾಗಿ ಮನೆಗೆ, ಕುಟುಂಬಕ್ಕೆ, ಊರಿಗೆ, ನಾಡಿಗೆ ಹಾಗೂ ದೇಶಕ್ಕೆ ಒಳ್ಳೆಯ ಆಸ್ತಿಯಾಗಿ ಮೂಡಿ ಬನ್ನಿ ಎಂದು ಸಾಣೂರು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ ಟ್ರಸ್ಟ್‌ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಸರಣಿ ಮಾಲಿಕೆಯ ಸುವರ್ಣ ಸಂಚಿಕೆಯ 50ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭ ವಿದ್ವಾಂಸ ಮುನಿರಾಜ್ ರೆಂಜಾಳ, ನಿವೃತ್ತ ಪ್ರಾಂಶುಪಾಲ ಬೇಬಿ ಈಶ್ವರ ಮಂಗಲ, ನಿವೃತ್ತ ಶಿಕ್ಷಕ ಜಗದೀಶ್, ಉದ್ಯಮಿ ದೇವೇಂದ್ರ ನಾಯಕ್, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ವಿದ್ಯಾವತಿ ಎಸ್. ಶೆಟ್ಟಿ, ಅನಿಲ್ ಕುಮಾರ್‌ ಜೈನ್, ಸಿ.ಇ.ಒ. ಹಾಗೂ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಉಪಪ್ರಾಂಶುಪಾಲ ಸಾಹಿತ್ಯ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲ ರವಿ ಜಿ., ಅಜೆಕಾರು ಜ್ಞಾನಸುಧಾ ಪ್ರಾಂಶುಪಾಲ ಸಂತೋಷ್, ಪ್ರೌಢಶಾಲೆಯ ಉಪಪ್ರಾಂಶುಪಾಲೆ ಆರತಿ ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಆಂಗ್ಲಭಾಷ ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸನಾತನ ರಾಷ್ಟ್ರಾಂಜಲಿ
ಮೌಲ್ಯಸುಧಾದ ಸುವರ್ಣ ಮಾಲಿಕೆಯಲ್ಲಿ ರಾಜ್ಯದಲ್ಲಿ ವಿಭಿನ್ನ ನೃತ್ಯ ಸಂಸ್ಥೆಯಾಗಿ ಗುರುತಿಸಿಕೊಂಡು ಹಾಗೂ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಸೇವೆಯನ್ನು ನೀಡುತ್ತಾ ಬಂದಿರುವ ನೃತ್ಯ ಸಂಸ್ಥೆ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸುಂದರ ಕಾರ್ಯಕ್ರಮ ಮೂಡಿ ಬಂತು. ನಾಟ್ಯಾಲಯದ ನೃತ್ಯ ಗುರು ವಿದುಷಿ ಶ್ರೀಲತಾ ನಾಗರಾಜ್‌ರವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಲತೇಶ್ ಬಾಕ್ರಬೈಲು ನಿರೂಪಿಸಿದರು.















































































error: Content is protected !!
Scroll to Top