ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಅ. 31ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರ ಅಧ್ಯಕ್ಷತೆಯಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ಹಿರಿಯ ಮುಖಂಡ ಶೇಖರ್ ಮಡಿವಾಳ್, ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್, ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಿ. ಆರ್. ರಾಜು ಸಂದರ್ಭೋಚಿತ ಮಾತನಾಡಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭ ಬ್ಲಾಕ್ ನಿಕಟ ಪೂರ್ವ ಅಧ್ಯಕ್ಷ ಸದಾಶಿವ ದೇವಾಡಿಗ, ಸುಬಿತ್ ಕುಮಾರ್ ಎನ್., ಪ್ರಭಾಕರ್ ಬಂಗೇರ, ತಾರಾನಾಥ ಕೋಟ್ಯಾನ್, ಕಾಂತಿ ಶೆಟ್ಟಿ, ಜೊಕಿಂ ಪಿಂಟೋ, ಪುರಸಭಾ ಸದಸ್ಯರಾದ ಹರೀಶ್ ಕುಮಾರ್, ರೆಹಮತ್, ಅಣ್ಣಪ್ಪ ನಕ್ರೆ, ಅಬ್ದುಲ್ ಸಾಣೂರು, ವಿವೇಕ್ ಶೆಣೈ, ಫಿಲಿಫ್, ಪ್ರಸನ್ನ ಶೆಟ್ಟಿಗಾರ್, ಶೋಭಾ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲಿನೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುನೀಲ್ ಭಂಡಾರಿ ವಂದಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ























