5 ವರ್ಷದಲ್ಲಿ 255 ಕೋಟಿ ರೂ. ಸಂಪಾದಿಸಿದ ಸಂಸದ
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹೋದರ ಸಂಸದ ಡಿ.ಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಸಂಸದ ಡಿ.ಕೆ.ಸುರೇಶ್ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇ.75ರಷ್ಟು ಏರಿಕೆಯಾಗಿದೆ. ಸುರೇಶ್ 593 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ, 2019 ರಲ್ಲಿ 338 ಕೋಟಿ ರೂಪಾಯಿ ಇತ್ತು. ರಾಮನಗರ ಮತ್ತು ಬೆಂಗಳೂರಿನಲ್ಲಿರುವ ಅವರ ಸ್ಥಿರ ಆಸ್ತಿಗಳಾದ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಮತ್ತು ಕೃಷಿ ಭೂಮಿಯ (ಪಿತ್ರಾರ್ಜಿತ) ಮೌಲ್ಯದಿಂದಾಗಿ ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಸ್ಥಿರಾಸ್ತಿಗಳು ಬರೋಬ್ಬರಿ 486 ಕೋಟಿ ರೂಪಾಯಿ ಇದೆ. 2019 ರಲ್ಲಿ 33 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದ ಸುರೇಶ್ ಈಗ 106 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದು ಐದು ವರ್ಷಗಳಲ್ಲಿ ಶೇ.220 ಹೆಚ್ಚಳವಾಗಿದೆ. ವಿವಿಧ ಕಂಪನಿಗಳಲ್ಲಿ ಹೂಡಿಕೆ 2,14,87,182 ಎನ್‌ಎಸ್‌ಎಸ್, ಪೋಸ್ಟಲ್ ಸೇವಿಂಗ್ಸ್, ವಿಮೆ ಹೂಡಿಕೆ: 15,17,394 ಮನೆಯ ವಸ್ತುಗಳು ಮತ್ತು ಪೀಠೋಪಕರಣಗಳ ಮೌಲ್ಯ: 73,58,771 ಪ್ರಮುಖರಿಗೆ ನೀಡಿದ ಸಾಲದ ವಿವರ ಹೀಗೆ: ಡಿಕೆ ಶಿವಕುಮಾರ್: 30,08,29,025 ಸುಮಾ ರಂಗನಾಥ್: 30,00,000 ಶ್ರೀಮತಿ ಗೌರಮ್ಮ: 4,75,00,000 ಐಶ್ವರ್ಯ ಶಿವಕುಮಾರ್: 7,94,42,717 ಆಕಾಶ್ ಕೆಂಪೇಗೌಡ: 1,06,03,060 ಒಟ್ಟು ಸಾಲ: 86,79,02,710 ಅಫಿಡವಿಟ್ನಲ್ಲಿ 21 ಕೃಷಿ ಭೂಮಿ, 27 ಕೃಷಿಯೇತರ ಜಮೀನು ಹೊಂದಿದ್ದಾರೆ. ಸದ್ಯದ ಕೃಷಿ ಭೂಮಿ ಮೌಲ್ಯ 32.75 ಕೋಟಿ ರೂ., ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ. ಆಗಿದೆ. 9 ವಾಣಿಕ್ಯ ಸಂಕೀರ್ಣಗಳ ಮೌಲ್ಯ 211.91 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ.





