ಕಾರ್ಕಳ: ಮುಡಾರು ಗ್ರಾಮದ ಕಂಬಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿರುವ ಘಟನೆ ನಿನ್ನೆ ಸಂಭವಿಸಿದೆ.
ಬೆಳಗ್ಗೆ 10.45 ವೇಳೆ ಕಾರ್ಕಳ-ಎಸ್.ಕೆ. ಬಾರ್ಡರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರ ಸುದರ್ಶನ ಶೇರಿಗಾರ ಎಂಬುವವರು ಬಜಗೋಳಿ ಪೇಟೆ ಕಡೆಯಿಂದ ಕಂಬಳ ಕ್ರಾಸ್ ಕಡೆಗೆ ಬೈಕನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶೀನ ನಲ್ಕೆ ಎಂಬವರಿಗೆ ಢಿಕ್ಕಿ ಹೊಡೆದು, ಬಳಿಕ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಹಲ್ಮೆರಗುತ್ತು, ಗಣಪತಿ ಕಟ್ಟೆಯ ವಿಶಾಲ ಶೆಟ್ಟಿ (31)ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಶೀನ ನಲ್ಕೆಯವರ ಬಲಕಾಲಿನ ಪಾದದ ಗಂಟಿಗೆ ಗುದ್ದಿದ ಗಾಯ ಹಾಗೂ ವಿಶಾಲ ಶೆಟ್ಟಿಯವರ ಬೆನ್ನಿಗೆ ಗುದ್ದಿದ್ದು ಹಾಗೂ ಎರಡೂ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಶಾಲ ಶೆಟ್ಟಿ ಪ್ರಕರಣ ದಾಖಲಿಸಿದ್ದಾರೆ.
ಮುಡಾರಿನಲ್ಲಿ ಬೈಕ್ ಡಿಕ್ಕಿ : ರಸ್ತೆ ದಾಟುತ್ತಿದ್ದ ಇಬ್ಬರಿಗೆ ಗಾಯ
