ಆಂಬುಲೆನ್ಸ್‌ಗೆ ಓಮ್ನಿ ಡಿಕ್ಕಿ: ಮಹಿಳೆಗೆ ಗಾಯ


ಹೆಬ್ರಿ: ಹೆಬ್ರಿ ಗ್ರಾಮದ ಮೇಲ್ಪೇಟೆಯ ಹಳೇ ಕುಬೇರ ಬಾರ್ ಎದುರು ಅ.17ರ ರಾತ್ರಿ ಆಂಬುಲೆನ್ಸ್‌ಗೆ ಮಾರುತಿ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್‌ನಲ್ಲಿದ್ದ ಸಾಕಮ್ಮಬಾಯಿ ಎಂಬ ಮಹಿಳೆ ಗಾಯಗೊಂಡಿದ್ದಾರೆ. ಫ್ರಾನ್ಸಿಸ್‌ ಮಸ್ಕರೇನಸ್‌ ತನ್ನ ಓಮ್ನಿ ಆಂಬುಲೆನ್ಸ್‌ನಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿದ್ದ ಪ್ರಿಯಾಂಕ ಎಂಬವರನ್ನು ದಾವಣಗೆರೆಯ ಹೊನ್ನಾಳಿಗೆ ಕರೆದುಕೊಂಡು ಹೋಗುವಾಗ ರಾತ್ರಿ 9.30ರ ವೇಳೆಗೆ ಹೆಬ್ರಿಯಲ್ಲಿ ಒಮ್ನಿ ಚಾಲಕ ಪ್ರಕಾಶ್‌ ಎಂಬವರು ಅತಿ ವೇಗದಿಂದ ವಾಹನ ಚಲಾಯಿಸಿಕೊಂಡು ಬಂದು ಆಂಬುಲೆನ್ಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್‌ನ ಮುಂದಿನ ಭಾಗ ಜಖಂಗೊಂಡಿದೆ. ಆಂಬುಲೆನ್ಸ್‌ನಲಲ್ಲಿದ್ದ ಸಾಕಮ್ಮ ಅವರಿಗೆ ತಲೆ ಮತ್ತು ಮೂಗಿಗೆ ಗಾಯವಾಗಿದೆ ಮತ್ತು ಜೊತೆಗೆ ಇದ್ದ ಭೀಮಾ ನಾಯ್ಕ್‌ ಮತ್ತು ಪ್ರಾನ್ಸಿಸ್ ಮಸ್ಕರೇನಸ್‌ ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Latest Articles

error: Content is protected !!