ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಹಾವೇರಿ ಮೂಲದ ವಿದ್ಯಾರ್ಥಿ ಸಾವು

ಕೀವ್ : ಉಕ್ರೇನ್‌ ಮೇಲೆ ರಷ್ಯಾದ ನಡೆಸುತ್ತಿರುವ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ವರದಿಯಾಗಿದೆ. ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕೀವ್‌ನಲ್ಲಿ ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಭಾರತ ಮೂಲದ ವಿದ್ಯಾರ್ಥಿ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ಮೃತರನ್ನು ಹಾವೇರಿ ಮೂಲದ ನವೀನ್ ಎಂದು ಗುರುತಿಸಲಾಗಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಶೇಖಪ್ಪ ಗ್ಯಾನಗೊಂಡರ್ ಮೃತ ದುರ್ದೈವಿ. ಅವರು ನಾಲ್ಕು ವರ್ಷದಿಂದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಉಕ್ರೇನ್‌ನ ಪಶ್ಚಿಮ ಭಾಗದ ಗಡಿಯನ್ನು ತಲುಪಲು ಕೀವ್‌ಗೆ ತೆರಳಲು ಅವರು ರೈಲ್ವೆ ನಿಲ್ದಾಣದತ್ತ ಹೊರಟಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ರಾಜಧಾನಿ ಕೀವ್ ನಗರದಲ್ಲಿರುವ ನಾಗರಿಕರು ಈ ಕೂಡಲೇ ತುರ್ತಾಗಿ ನಗರವನ್ನು ತೊರೆದು ಪಶ್ಚಿಮ ಭಾಗಕ್ಕೆ ಬರುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಉಕ್ರೇನ್ ರಾಯಭಾರ ಕಚೇರಿ ಸೂಚನೆ ನೀಡಿತ್ತು. ಅದರ ಬೆನ್ನಲ್ಲೇ ನವೀನ್ ಅವರ ಸಾವಿನ ಸುದ್ದಿ ಬಂದಿದೆ.























































































































































error: Content is protected !!
Scroll to Top