ಬಾರಾಡಿಯಲ್ಲಿ ಮಂಗಗಳ ಶವ ಎಸೆದು ಹೋದ ಕಿಡಿಗೇಡಿಗಳು

ಕಾರ್ಕಳ, ಅ. 21: ಕಾಂತಾವರ ಗ್ರಾಮದ ಬಾರಾಡಿ ರಸ್ತೆಯಲ್ಲಿ ನಿನ್ನೆ  ಸಂಜೆ ಅಜ್ಞಾತ ಕಿಡಿಗೇಡಿಗಳು ಸುಮಾರು 15 ಮಂಗಗಳ ಶವಗಳನ್ನು ಎಸೆದು ಹೋಗಿದ್ದಾರೆ.

ವಿಷವುಣ್ಣಿಸಿ ಮಂಗಗಳನ್ನು ಕೊಂದು ಶವಗಳನ್ನು ಓಮ್ನಿ ಕಾರಿನಲ್ಲಿ ತಂದು ಎಸೆದು ಹೋಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯ ಬಾರಾಡಿ ಫ್ರೆಂಡ್ಸ್‌ ಕ್ಲಬ್‌ ಸದಸ್ಯರು ಅರಣ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದ ಬಳಿಕ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೃಷಿಗೆ ಹಾವಳಿ ಕೊಡುವ ಮಂಗಗಳನ್ನು ವಿಷ ಹಾಕಿ ಕೊಂದು ದೂರ ಕೊಂಡು ಹೋಗಿ ಎಸೆಯುವ ಪ್ರವೃತ್ತಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಹೆಬ್ರಿ ಸಮೀಪ ಇದೇ ರೀತಿ ಮಂಗಗಳ ಶವಗಳನ್ನು ಕಾರಿನಲ್ಲಿ ತಂದು ಎಸೆದು ಹೋಗಿದ್ದರು.



































































































error: Content is protected !!
Scroll to Top