ಹೋಂ ಕ್ವಾರಂಟೈನ್‌ ಆದವರ ಮೇಲೆ ಟೆಲಿ ಮಾನಿಟರಿಂಗ್‌

ಬೆಂಗಳೂರು, ಸೆ. 28: ಮನೆಯಲ್ಲೇ ಕ್ವಾರಂಟೈನ್‌ ಅಗುವವರ ಮೇಲೆ ಕಣ್ಗಾವಲು ಇಡುವ ಹೊಣೆಯನ್ನು ಸರಕಾರ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದೆ. ಕೊರೊನಾ ಪಾಸಿಟಿವ್‌ ವರದಿ ಬಂದ ಬಳಿಕ ಮನೆಯಲ್ಲೇ ಕ್ವಾರಂಟೈನ್‌ ಆಗಿತ್ತೇವೆ ಎನ್ನುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಥವರ ಮೇಲೆ ಕಣ್ಗಾವಲು ಇಡುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ವ್ಯವಸ್ಥೆ ಮಾಡಿದೆ.

ಹೆಲ್ತ್‌ ವಿಸ್ಟಾ ಇಂಡಿಯಾ ಲಿಮಿಟೆಡ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ನಡೆಸುತ್ತಿರುವ ಪೋರ್ಟಿಯಾ ಮೆಡಿಕಲ್‌ ಗೆ ಕಣ್ಗಾವಲು ಹೊಣೆಯನ್ನು ವಹಿಸಲಾಗಿದೆ.

ಫೋನಿನಲ್ಲಿ ಕಣ್ಗಾವಲು

ಮನೆಯಲ್ಲಿ ಕ್ವಾರಂಟೈನ್‌ ಆದವರ ಮೇಲೆ ಪೋರ್ಟಿಯಾ ಮೆಡಿಕಲ್‌ ಫೋನ್‌ ಮೂಲಕವೇ ಕಣ್ಗಾವಲು ಇಡಲಿದೆ. ಇದರ ಸಿಬಂದಿಗಳು ಮನೆಯಲ್ಲಿ ಕ್ವಾರಂಟೈನ್‌ ಆಗಿರುವವರಿಗೆ ಕರೆ ಮಾಡಿ ಅವರ ಆರೋಗ್ಯ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ಮೊದಲು ಸ್ವಸ್ಥ್‌ ಎಂಬ ಎನ್‌ಜಿಓ ಒಂದು ಕರೆಗೆ 95 ರೂ. ಪಡೆದುಕೊಂಡು ಈ ಕೆಲಸ ಮಾಡುತ್ತಿತ್ತು.

ಒಂದು ಕರೆಗೆ 65 ರೂ.

ಪೋರ್ಟಿಯಾ ಮೆಡಿಕಲ್‌ ಗೆ ಸರಕಾರ ಒಂದು ಕರೆಗೆ 65 ರೂ. ಪಾವತಿಸಲಿದೆ. ಮನೆಯಲ್ಲಿ ಕ್ವಾರಂಟೈನ್‌ ಆಗಿರುವವರಿಗೆ 6ರಿಂದ 8 ದಿನಗಳಲ್ಲಿ ಗರಿಷ್ಠ 5 ಸಲ ಕರೆ ಮಾಡಬೇಕು. ಹೀಗೆ ಹೋಮ್‌ ಕ್ವಾರಂಟೈನ್‌ ಆದವರಿಗೆ ಸುಮಾರು 300 ರೂ. ಸರಕಾರ ಖರ್ಚು ಮಾಡಲಿದೆ.

ದಿನಕ್ಕೆ 2,500 ರೋಗಿಗಳಿಗೆ ಕರೆ ಮಾಡಲಿದ್ದು, ನಿತ್ಯ 7.75 ರೂ. ಬರೀ ಫೋನ್‌ ಕರೆಗೆ ಖರ್ಚಾಗುತ್ತದೆ. ಸೆ.23ರ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ಹೋಂ ಕ್ವಾರಂಟೈನ್‌ ಆಗಿದ್ದರು.
















































































































































error: Content is protected !!
Scroll to Top