ಮಂಗಳೂರು, ಸೆ. 28 : ಸ್ಯಾಂಡಲ್ ವುಡ್ ತಾರೆಯರ ಡ್ರಗ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸುರತ್ಕಲ್ ಸಮೀಪದ ಸೂರಿಂಜೆಯ ಮೊಹಮ್ಮದ್ ಶಕೀರ್ (35) ಸೆರೆಯಾಗಿರುವ ಆರೋಪಿ. ಇವನಿಂದ ಸುಮಾರು 23,000 ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಶಕೀರ್ ಮುಂಬಯಿಯಿಂದ ಡ್ರಗ್ಸ್ ತರಿಸಿ ಅದನ್ನು ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.






































































