ದಿಲ್ಲಿ, ಆ. 24: ಕಾಂಗ್ರೆಸಿನ ಅತ್ಯಂತ ಮಹತ್ವದ ಕಾರ್ಯಕಾರಿಣಿ ಬೈಠಕ್ ನಲ್ಲಿ ನಿರೀಕ್ಷೆಯಂತೆಯೇ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪದತ್ಯಾಗ ಇಂಗಿತ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕೆಲವು ಹಿರಿಯ ನಾಯಕರು ಪಕ್ಷಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರು ಅಯ್ಕೆಯಾಗಬೇಕು ಮತ್ತು ಪಕ್ಷಕ್ಕೆ ಕಾಯಕಲ್ಪ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕರೆಯಲಾದ ವರ್ಚುವಲ್ ಬೈಠಕ್ ನಲ್ಲಿ ಸೋನಿಯಾ ಪಕ್ಷವೇ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿ ಎಂದು ಹೇಳಿದ್ದಾರೆ.


















