Friday, August 19, 2022
spot_img
Homeದೇಶಕಾಶ್ಮೀರ : ಪುಲ್ವಾಮ ಮಾದರಿ ಸಂಚು ವಿಫಲ

ಕಾಶ್ಮೀರ : ಪುಲ್ವಾಮ ಮಾದರಿ ಸಂಚು ವಿಫಲ

ಶ್ರೀನಗರ,ಆ. 17 : ಕಳೆದ ಬಾರಿ ಪುಲ್ವಾಮದಲ್ಲಿ ನಡೆಸಿದ್ದ ದಾಳಿಯ ಮಾದರಿಯಲ್ಲೇ ಮತ್ತೊಂದು ಭೀಕರ ದಾಳಿ ನಡೆಸಲು ಉಗ್ರರು ಹೂಡಿದ್ದ ಭಾರಿ ಸಂಚನ್ನು ಭದ್ರತಾ ಪಡೆ ವಿಫಲಗೊಳಿಸಿದೆ. ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಮಾಡಿದ ಬೆನ್ನಿಗೆ ಈ ಕಾರ್ಯಾಚರಣೆ  ನಡೆದಿದೆ.

ಪುಲ್ವಾಮಾ ಜಿಲ್ಲೆಯ ತುಜಾನ್​ ಗ್ರಾಮದ ಸೇತುವೆಯ ಅಡಿಯಲ್ಲಿ ಉಗ್ರರು ಇರಿಸಿದ್ದ ಪ್ರಬಲ  ಸ್ಫೋಟಕವನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯ ಸೇನಾ ಸಿಬ್ಬಂದಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಸೇತುವೆ ಕೆಳಗೆ ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು ಇರಿಸಿದ್ದರು ಎಂದು ತಿಳಿಸಿದ್ದಾರೆ.

ಉಗ್ರ ದಾಳಿಗೆ ಇಬ್ಬರು ಯೋಧರು ಹುತಾತ್ಮ

ಬಾರಾಮುಲ್ಲಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ  ಓರ್ವ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಸಿಆರ್’ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಎಂಬ ಪ್ರದೇಶಕ್ಕೆ ಬಂದಿರುವ ಉಗ್ರರು ಈ ವೇಳೆ ಗಸ್ತು ತಿರುಗುತ್ತಿದ್ದ ಸಿಆರ್’ಪಿಎಫ್ ಪಡೆಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಓರ್ವ ಪೊಲೀಸ್ ಅಧಿಕಾರಿ ಸೇರಿ ಇಬ್ಬರು ಸಿಆರ್’ಪಿಎಫ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ತಿಳಿದುಬಂದಿದೆ.

4ಜಿ ಮೊಬೈಲ್ ಡಾಟಾ ಸೇವೆ ಆರಂಭ 

ಈ ನಡುವೆ ಕಾಶ್ಮೀರದ ಮಧ್ಯ ಭಾಗದಲ್ಲಿರುವ ಗಂದರ್​ಬಾಲ್​ನಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಗ್ರಾಹಕರಿಗೆ 4ಜಿ ಸೇವೆಯನ್ನು ಮರ ಸ್ಥಾಪಿಸಲಾಗಿದೆ. ಉಳಿದ ಭಾಗದಲ್ಲಿ 2ಜಿ ಸೇವೆ ಮುಂದುವರಿಯಲಿದೆ.

 

 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!