ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಜನ್ಮದಾತ ಹಕ್ಕು : ಸುಪ್ರೀಂ ಕೋರ್ಟ್‌

ದಿಲ್ಲಿ, ಆ.11: ಹಿಂದು ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆ -2005 ಜಾರಿಗೆ ಬರುವ ಮೊದಲೇ ತಂದೆ ತೀರಿಕೊಂಡಿದ್ದರೂ  ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯ ಮೇಲೆ ಜನ್ಮದಾತವಾದ ಹಕ್ಕು ಇರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕೆಲವು ನ್ಯಾಯಾಲಯಗಳು ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ನೀಡುವ ವಿಚಾರವಾಗಿ ಭಿನ್ನ ತೀರ್ಪುಗಳನ್ನು ನೀಡಿರುವುದರಿಂದ  ಉಂಟಾಗಿರುವ ಗೊಂದಲವನ್ನು ನಿವಾರಿಸಿರುವ ಸುಪ್ರಿಂ ಕೋರ್ಟ್‌ ಕಾಯಿದೆ ಜಾರಿಗೆ ಬಂದ  ಬಳಿಕ ತಂದೆಯ ಮೃತ್ಯು ಸಂಭವಿಸಿದ್ದರೆ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಇದೆ ಎನ್ನುವುದನ್ನು ಕಾಯಿದೆಯಲ್ಲಿ ಸ್ಪಷ್ಟ ಪಡಿಸಲಾಗಿತ್ತು. ಆದರೆ ಕಾಯಿದೆ ಜಾರಿಗೆ ಬರುವ ಮೊದಲೇ ತಂದೆ ತೀರಿಕೊಂಡ ಪ್ರಕಣಗಳಿಗೆ ಸಂಬಂಧಿಸಿ ಗೊಂದಲವಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆಸ್ತಿ ಹಕ್ಕಿನ ವಿಚಾರವನ್ನು ಸ್ಪಷ್ಟಪಡಿಸಿದೆ.

ಕಾಯಿದೆಯ ಸೆಕ್ಷನ್‌ 6ರಲ್ಲಿ ನೀಡಲಾಗಿರುವ ಹಕ್ಕನ್ನು ಹೆಣ್ಣು ಮಕ್ಕಳಿಗೆ ನಿರಾಕರಿಸುವಂತಿಲ್ಲ. ಪುತ್ರಿ ಕುಟುಂಬದ ಎಲ್ಲರಿಗೂ ಮುದ್ದಿನ ಮಗಳಾಗಿಯೇ ಇರುತ್ತಾಳೆ ಎಂದು ಈ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾ. ಅರುಣ್‌ ಮಿಶ್ರಾ ಹೇಳಿದ್ದಾರೆ. ಹಿಂದು ಉತ್ತರಾಧಿಕಾರ ಕಾಯಿದೆ 2005, ಸೆ.9ರಂದು ಜಾರಿಗೆ ಬಂದಿದೆ.

 







































































error: Content is protected !!
Scroll to Top