ದಿಲ್ಲಿ, ಆ. 11: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅರೋಗ್ಯ ಸ್ಥಿತಿ ಗಂಭೀರವಾಗಿದೆ. ದಿಲ್ಲಿಯ ಆರ್ಮಿ ರೀಸರ್ಚ್ ಆಂಡ್ ರೆಫೆರಲ್ ಆಸ್ಪತ್ರೆಗೆ ದಾಖಲಿಸಲಾಗಿರುವ ಮುಖರ್ಜಿ ಅವರಿಗೆ ಸೋಮವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.
ಆವರಿಗೆ ಮಿದುಳಿನ ಶಸ್ತ್ರಕ್ರಿಯೆ ಮಾಡಲಾಗಿದೆ. ಅನಂತರವೂ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ಅವರು ವೆಂಟಿಲೇಟರ್ ನಲ್ಲಿದ್ದಾರೆ.