ಕಾರ್ಕಳ : ಕಾರ್ಕಳ ಬಸ್ ನಿಲ್ದಾಣ ಬಳಿಯ ಗಣೇಶ್ ಪ್ರಸಾದ್ ಹೊಟೇಲ್ ಸಮೀಪದಲ್ಲಿ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವರ ಶವ ಆ. 8ರ ಮಧ್ಯಾಹ್ನ ಪತ್ತೆಯಾಗಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತರೋರ್ವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು. ಪೊಲೀಸರು ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಿರುತ್ತಾರೆ. ಇದೀಗ ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮೃತರ ಕುಟುಂಬಸ್ಥರು ಅಥವಾ ಸಂಬಂಧಿಕರು ನಗರ ಪೊಲೀಸ್ ಠಾಣೆ 08258-230213, 8277790353 ನಂಬರ್ ಸಂಪರ್ಕಿಸುವಂತೆ ಎಸ್‌ಐ ಮಧು ಬಿ.ಇ. ತಿಳಿಸಿದ್ದಾರೆ.
ಕಾರ್ಕಳ : ಅಪರಿಚಿತ ಶವ ಪತ್ತೆ
