ರಾಷ್ಟ್ರೀಯ ಸ್ವಚ್ಛತಾ ಕೇಂದ್ರಕ್ಕೆ ಚಾಲನೆ   

ದಿಲ್ಲಿ, ಆ. 7 : ರಾಜ್‌ಘಾಟ್ ಬಳಿ ನಿರ್ಮಿಸಲಾಗಿರುವ ಸ್ವಚ್ಛ ಭಾರತ್ ಮಿಷನ್‌ನ ಸಂವಾದ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು ಪ್ರಧಾನಿ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದರು.

ಮಹಾತ್ಮಾ ಗಾಂಧಿ ಅವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಅಂಗವಾಗಿ ರಾಜ್‌ಘಾಟ್ ಬಳಿಯ ಗಾಂಧೀಜಿ ಅವರ ಸಮಾಧಿಯ ಸಮೀಪವೇ ಈ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ.

ಈ ಸಂದರ್ಭ ಮಾತನಾಡಿರುವ ಮೋದಿ, ಜನರ ಬದುಕಿನ ಭಾಗವಾಗಿ ಬದಲಾದ ಸ್ವಚ್ಛ ಭಾರತ ಮಿಷನ್ ಎಂಬ ಪರಿಕಲ್ಪನೆಯ ಬಗ್ಗೆ ಈ ಕೇಂದ್ರ ಮುಂದಿನ ಜನಾಂಗಕ್ಕೆ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಸ್ವಚ್ಛತೆಯ ಕುರಿತಂತೆ ಜನರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿಯೂ ಈ ಕೇಂದ್ರ ಮಹತ್ವ ಪಡೆಯಲಿದೆ ಎಂದು ತಿಳಿಸಿದ್ದಾರೆ.

ಸ್ವಚ್ಛ ಭಾರತದ ಬಗ್ಗೆ ಜನರಿಗೆ ಸಂವಾದಾತ್ಮಕ ಮಾಹಿತಿ ಸಂಗ್ರಹಣೆ, ಈ ಯೋಜನೆಯ ಯಶಸ್ಸಿನ ಹಿನ್ನೆಲೆ, ಕಥೆಗಳನ್ನು ತಿಳಿದುಕೊಳ್ಳುವಲ್ಲಿಯೂ ಈ ಕೇಂದ್ರ ಮಹತ್ವ ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಈ ಕೇಂದ್ರದ ಮೂಲಕ ತಂತ್ರಜ್ಞಾನ ಮತ್ತು ಹೊರಾಂಗಣ ವಿಚಾರನ್ನೊಳಗೊಂಡಂತೆ ಸ್ವಚ್ಛ ಭಾರತ ಮಿಷನ್‌ನ ಸಂಪೂರ್ಣ ಚಿತ್ರಣವನ್ನು ಯುವಜನಾಂಗಕ್ಕೆ ನೀಡುವಲ್ಲಿಯೂ ಪೂರಕವಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 





























































































































































































































error: Content is protected !!
Scroll to Top