ನಿತ್ಯ ಭವಿಷ್ಯ -09-08-2020

ಮೇಷ

ಅನೇಕ ಒಳ್ಳೆಯ ಅವಕಾಶಗಳು ತಾವಾಗಿಯೇ ಬರುತ್ತಿದೆ. ಅದೃಷ್ಟಶಾಲಿಗಳು ನೀವು. ಹಣಕಾಸಿನ ವಿಷಯದಲ್ಲಿ ಯೋಜನೆ, ಯೋಚನೆ ಸರಿಯಾಗಿರಲಿ.

ವೃಷಭ

ನಿಮ್ಮ ಸಮಸ್ಯೆಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳಿರಿ. ಸೂಕ್ತ ಪರಿಹಾರ ಸಿಗಲಿದೆ. ಅವಿವಾಹಿತರು ನವೆಂಬರ್  ತನಕ  ಕಾದು ನೋಡಿರಿ. ಆದಷ್ಟು ತಾಳ್ಮೆ ಇರಲಿ. ಅಷ್ಟಮದಲ್ಲಿ ಗುರು ಕೇತು ಇರುವುದು ಶುಭ ಲಕ್ಷಣವಲ್ಲ.

ಮಿಥುನ

ಅಷ್ಟಮದಲ್ಲಿ ಭಾಗ್ಯಾಧಿಪತಿ ಶನಿ ಇರುವುದರಿಂದ ಹಿರಿಯರ ಅನಾರೋಗ್ಯದಿಂದ ಮನೋಲ್ಲಸಕ್ಕೆ ತೊಂದರೆಯಾಗಲಿದೆ. ದ್ವಿತೀಯಲ್ಲಿ ರವಿ, ಬುಧ ಇರುವುದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಯಶಸ್ಸಿಯಾಗುವರು.

ಕರ್ಕಾಟಕ

ಷಷ್ಠದಲ್ಲಿ ಗುರುಕೇತು ಇರುವುದರಿಂದ ಆಗಾಗ ಆರೋಗ್ಯದಲ್ಲಿ ಏರುಪೇರಾಗಲಿದೆ. ಇದರಿಂದಾಗಿ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಲಿದೆ. ಪ್ರೀತಿ-ಪ್ರೇಮಕ್ಕೆ ಬೀಳುವ ಸೂಚನೆ ಇದೆ.

ಸಿಂಹ

ದೈವಾನುಗ್ರಹ ಉತ್ತಮವಿರುವುದರಿಂದ ನಿಮ್ಮ ಅಭಿಲಾಷೆಗಳು ಈಡೇರಲಿದೆ. ಕೇತು ಪಂಚಮದಲ್ಲಿರುವುದರಿಂದ ಮಕ್ಕಳ ವಿಚಾರದಲ್ಲಿ ಕಿರಿಕಿರಿ ಇರುತ್ತದೆ. ಶುಭ-ಅಶುಭ ಮಿಶ್ರಫಲ ಅನುಭವಿಸಲಿದ್ದೀರಿ.

ಕನ್ಯಾ

ಪಂಚಮದಲ್ಲಿ ಶನಿ ಇರುವುದರಿಂದ ಆರ್ಥಿಕ ಸಂಕಷ್ಟಗಳು ನಿಮ್ಮನ್ನು ಹಲವಾರು ರೀತಿಯಲ್ಲಿ ಕಾಡಲಿವೆ. ಮಕ್ಕಳಿಂದ ನಿರಂತರ ಸಮಸ್ಯೆ  ಶನಿ ತರಲಿದ್ದಾನೆ. ನವಗ್ರಹ ಸ್ತೋತ್ರ ಪಠಿಸಿರಿ.

ತುಲಾ

ಚತುರ್ಥದಲ್ಲಿ ಶನಿ ಬಂದಾಗ ಹಲವಾರು ಆಪತ್ತುಗಳು ಮಾನಸಿಕವಾಗಿ ,ಶಾರೀರಿಕವಾಗಿ ಬರಲಿದೆ ಎಂಬ ಸೂಚನೆ ಯಿದೆ .ವಾಹನ ಚಾಲಕರು ಜಾಗ್ರತೆ ವಹಿಸಿರಿ .ಸಹೋದರ ವರ್ಗದವರ ಜೊತೆಗೆ ಮೃದುವಾಗಿ ವರ್ತಿಸಿರಿ.

ವೃಶ್ಚಿಕ

ರವಿ ,ಬುಧ ನಿಮ್ಮ ಉದ್ಯೋಗದಲ್ಲಿ ಕೆಲವೊಂದು ಬದಲಾವಣೆಯನ್ನು ಸೂಚಿಸುತ್ತಿದ್ದಾನೆ .ದ್ವಿತೀಯದಲ್ಲಿ ಗುರು ಕೇತು ಇದ್ದರೂ ಆರ್ಥಿಕ ಪ್ರಗತಿಯನ್ನು ನಿರೀಕ್ಷಿಸುವಂತಿಲ್ಲ.ರೈತಾಪಿ ವರ್ಗದವರು ಯಶಸ್ವಿಯಾಗುವರು.

 ಧನು

ದ್ವಿತೀಯದಲ್ಲಿ ತೃತೀಯಾಧಿಪತಿ ಶನಿ ಇರುವುದರಿಂದ ಜನ್ಮದಲ್ಲಿ ಗುರುಕೇತು ಇರುವುದರಿಂದ ಶತ್ರುಪೀಡೆ, ಅವಮಾನಗಳು ವ್ಯರ್ಥ ಖರ್ಚು ಬರಲಿದೆ. ಕುಜ ಸುಖ ಸ್ಥಾನದಲ್ಲಿದಾನೆ. ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಕರ

ಜನ್ಮದ ಶನಿ ನೀವು ನಡೆಸುವ ಪ್ರತಿಯೊಂದು ವ್ಯವಹಾರದಲ್ಲಿಯೂ ಹಿನ್ನೆಡೆಯಾಗುವಂತೆ ಮಾಡಲಿದೆ. ನಿಂದನೆ ಅಪವಾದಗಳಿಗೆ ಗುರಿಯಾಗುವಿರಿ. ಶುಕ್ರರಾಹು ಷಷ್ಠದಲ್ಲಿರುವುದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಏರುಪೇರು  ಆಗುವ ಸಾಧ್ಯತೆ ಇದೆ. ದೇವಿಯನ್ನು ಪ್ರಾರ್ಥಿಸಿರಿ.

ಕುಂಭ

ರಾಶ್ಯಾಧಿಪತಿ ಶನಿಯೇ ವ್ಯಯದಲ್ಲಿರುವುದರಿಂದ ಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಗೌರವಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಿ. ಗುರು ಲಾಭ ಕ್ಷೇತ್ರದಲ್ಲಿರುವುದರಿಂದ ಬರುವ ನಿಶ್ಚಿತ ಆದಾಯಕ್ಕೆ ತೊಂದರೆ ಬರಲಾರದು.

ಮೀನ

ಲಾಭಕ್ಷೇತ್ರದ ಶನಿಯಿಂದಾಗಿ ಸಂಪತ್ತು ಹಲವು ಮೂಲಗಳಿಂದ ಬರಲಿದೆ. ಇದರಿಂದಾಗಿ ಹಲವು ಸಮಯದಿಂದ ಯೋಚಿಸುತ್ತಿರುವ ಕನಸು ಈಡೇರಲಿವೆ. ಕರ್ಮಕ್ಷೇತ್ರದ ಗುರು ನಿಮಗೆ ಪ್ರತಿಷ್ಠ ಸ್ಥಾನಮಾನಗಲನ್ನು ಒದಗಿಸಿ ಕೊಡಲಿದ್ದಾನೆ.

ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
97414 89529

 error: Content is protected !!
Scroll to Top