ಸರಕಾರ ನಾಪತ್ತೆ : ರಾಹುಲ್‌ ಟೀಕೆ

0

ದಿಲ್ಲಿ, ಆ. 7:  ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 20 ಲಕ್ಷ ಗಡಿ ದಾಟುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಹಿಂದಿನ ಟ್ವೀಟ್ ಗಳನ್ನು ಪುನರುಚ್ಚರಿಸಿರುವ ರಾಹುಲ್ ಗಾಂಧಿ, ಜುಲೈ 17 ರಂದು 10 ಲಕ್ಷ ದಾಟಿದ ಕೊರೊನಾ  ಪ್ರಕರಣಗಳು ಆಗಸ್ಟ್ 10 ರೊಳಗೆ 20 ಲಕ್ಷ ದಾಟಿದೆ. ಈ ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ದೇಶದಲ್ಲಿ ಕೊರೊನಾ  ಪ್ರಕರಣಗಳ ಸಂಖ್ಯೆ 20 ಲಕ್ಷ ಗಡಿ ದಾಟಿದ್ದು, ಮೋದಿ ಸರ್ಕಾರ ನಾಪತ್ತೆಯಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

 

Previous articleಕೇರಳದ ಮುನ್ನಾರ್ ನಲ್ಲಿ ಭೀಕರ ಭೂಕುಸಿತ -5  ಸಾವು;ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ  
Next articleಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ

LEAVE A REPLY

Please enter your comment!
Please enter your name here