ಕಾರ್ಕಳ : ಕೊರೊನಾ ಸೋಂಕಿತ ಇರ್ವತ್ತೂರು ಮೂಲದ ವ್ಯಕ್ತಿ (72)ಯೋರ್ವರು ಆ. 5ರಂದು ಮೃತಪಟ್ಟಿರುತ್ತಾರೆ. ಮೂರು ದಿನಗಳ ಹಿಂದೆಯೇ ಅವರಿಗೆ ಕೊರೊನಾ ದೃಢಪಟ್ಟಿದ್ದು, ಬುಧವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಕಾರ್ಕಳ ಭುವನೇಂದ್ರ ವಸತಿ ಶಾಲೆಯಲ್ಲಿನ ಕೊರೊನಾ ವಾರ್ಡ್‌ಗೆ ದಾಖಲಾದರು. 1:30 ಹೊತ್ತಿಗೆ ಅವರು ಮೃತಪಟ್ಟಿರುತ್ತಾರೆ. ಅವರ ಮನೆಯಲ್ಲಿ ಇನ್ನಿಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ ಎನ್ನಲಾಗುತ್ತಿದೆ.
ಕೊರೊನಾಗೆ ಪ್ರಥಮ ಬಲಿ
ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 600ಕ್ಕೂ ಮಿಕ್ಕಿದ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇದೀಗ ಪ್ರಥಮ ಎಂಬಂತೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇರ್ವತ್ತೂರು ಮೂಲದ ವ್ಯಕ್ತಿ ಕೊರೊನಾಗೆ ಬಲಿಯಾಗಿರುತ್ತಾರೆ.