ಮಾಯಾ ನಗರಿಯ ಕೂಲಿ ಕಾರ್ಮಿಕರೆಂಬ ನತದೃಷ್ಟರ ಕತೆಯಿದು
ದಶರಥ್ ಗೋಡ್ಕರ್ ಮುಂಬಯಿಯ ದಾದರ್ ಸಮೀಪದ ಭೋಯಿವಾಡದ ಫ್ಲೈಓವರ್ ಕೆಳಗಿನ ಖಾಯಂ ನಿವಾಸಿ. ದಿನಗೂಲಿ ಕಾರ್ಮಿಕನಾಗಿರುವ ಗೋಡ್ಕರ್ ನಿತ್ಯ 500 ರೂ.ಗೆ ಕಡಿಮೆಯಿಲ್ಲದಂತೆ ಸಂಪಾದಿಸುತ್ತಿದ್ದ. ಫ್ಲೈಓವರ್ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಕೆಲಸಕ್ಕೆ ರೆಡಿಯಾಗಿ ನಿಂತರೆ ಏನಾದರೊಂದು ಕೂಲಿ ಕೆಲಸ ಸಿಕ್ಕಿಯೇ ಸಿಗುತ್ತಿತ್ತು.ಹೀಗೆ ಬದುಕು ಸಾಗುತ್ತಿದ್ದಾಗ ವಕ್ಕರಿಸಿತು ಕೊರೊನಾ. ಸೋಂಕು ಹರಡುವ ಭೀತಿಯಲ್ಲಿ ಗೋಡ್ಕರ್ ನನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಪರೇಲ್ ನ ಫ್ಲೈಓವರ್ ನಡಿಗೆ ಸಾಗಿಸಲಾಯಿತು.ಅಲ್ಲಿ ಅವನಂಥ ಇನ್ನೂ ಸುಮಾರು 150 ಮಂದಿ ಜಮೆಯಾಗಿದ್ದರು. […]
ಮಾಯಾ ನಗರಿಯ ಕೂಲಿ ಕಾರ್ಮಿಕರೆಂಬ ನತದೃಷ್ಟರ ಕತೆಯಿದು Read More »
