ಅಕ್ರಮವಾಗಿ ದನ ಸಾಗಾಟ – ಓರ್ವ ಪೊಲೀಸರ ವಶಕ್ಕೆ

ಕಾರ್ಕಳ : ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದಲ್ಲಿ ನಡೆದಿದೆ.

ಏಳಿಂಜೆ ಗ್ರಾಮದ ಜಯ ಮೂಲ್ಯ ಬಂಧಿತ ಆರೋಪಿ. ಕೆಎ 19 ಎಎಫ್ 2512 ನಂಬರ್‌ನ ಪಿಕಪ್ ವಾಹನದಲ್ಲಿ ರೋಶ್ನಿ ಎಂಬವರಿಂದ ಖರೀದಿಸಿದ ದನಗಳನ್ನು ಸಾಗಿಸುತ್ತಿದ್ದಾಗ ಸಂಕಲಕರಿಯ ರಾಜ್ಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪಿಕಪ್ ವಾಹನ ವಶಕ್ಕೆ ಪಡೆದು ದನಗಳನ್ನು ವಾಹನದಲ್ಲಿ ಠಾಣೆಗೆ ಕರೆದೊಯ್ಯಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































error: Content is protected !!
Scroll to Top