ದೇವರಾಜ ಅರಸು 110ನೇ ಜನ್ಮದಿನಾಚರಣೆ

ರಾಜ್ಯದಲ್ಲಿ ಭೂಮಸೂದೆ ಸಮರ್ಪಕವಾಗಿ ಜಾರಿಗೊಳಿಸಿದ ಧೀಮಂತ – ಅಜಿತ್‌ ಹೆಗ್ಡೆ ಮಾಳ

ದೇವರಾಜ ಅರಸು ಕಂಡ ಕನಸು ಸಾಕಾರವಾಗಲಿ – ಜ್ಯೋತಿ ಗುರುಪ್ರಸಾದ್‌

ಕಾರ್ಕಳ : ಹಿಂದುಳಿದ ವರ್ಗಗಳ, ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ರಾಜ್ಯದಲ್ಲಿ ಸಮರ್ಕಕವಾದ ರೀತಿಯಲ್ಲಿ ಭೂಮಸೂದೆಯನ್ನು ಜಾರಿಗೆ ತಂದಿರುವ ಧೀಮಂತ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅ‍ಧ್ಯಕ್ಷ ಅಜಿತ್‌ ಹೆಗ್ಡೆ ಮಾಳ ಅಭಿಪ್ರಾಯಪಟ್ಟರು.

ಅವರು ಆ. 20ರಂದು ಜಿ. ಪಂ., ತಾ. ಪಂ., ತಾಲೂಕು ಆಡಳಿತ, ಪುರಸಭೆ ಕಾರ್ಕಳ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವರಾಜ ಅರಸು ಭವನದಲ್ಲಿ ನಡೆದ ಅರಸು ಅವರ 110ನೇ ಜನ್ಮದಿನಾಚಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಧೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಸಾಮಾಜಿಕ ಹರಿಕಾರರಾಗಿ, ಸುಧಾರಕರಾಗಿ ಸಮಾಜದ ಪರಿವರ್ತನೆಗೆ ಕಾರಣರಾದವರು. ಯುವ ಸಮುದಾಯ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕೆಂದರು.

ಉಪನ್ಯಾಸ ನೀಡಿರುವ ನಿವೃತ್ತ ಪ್ರಾಧ್ಯಾಪಕಿ ಜ್ಯೋತಿ ಗುರುಪ್ರಸಾದ್‌, ದೇವರಾಜ ಅರಸು ಅವರು ಜನರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಆದ್ಯತೆ ನೀಡಿದವರು. ಆ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯಿಟ್ಟವರು. ಅರಸು ಅವರು ಕಂಡ ಎಲ್ಲ ಕನಸುಗಳು ಸಾಕಾರವಾಗುವ ನಿಟ್ಟಿನಲ್ಲಿ ನಾವೆಲ್ಲ ಮುಂದುವರಿಯಬೇಕೆಂದರು.

ತಾ. ಪಂ. ಪ್ರಥಮ ದರ್ಜೆ ಸಹಾಯಕ ಕೃಷ್ಣಾನಂದ, ಪುರಸಭಾ ವ್ಯವಸ್ಥಾಪಕ ಉದಯ ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ಎಸ್.‌ ಕುಂಬಾರ ಸ್ವಾಗತಿಸಿ, ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಮೊರಾರ್ಜಿ ದೇಸಾಯಿ ವಾರ್ಡನ್‌ ಕೃಷ್ಣಮೂರ್ತಿ ವಂದಿಸಿದರು.









































error: Content is protected !!
Scroll to Top