ಆಗಸ್ಟ್‌ 29ರಿಂದ 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಆರಂಭ‌

ದೆಹಲಿ : 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ಆ.29ಕ್ಕೆ ಆರಂಭಗೊಳ್ಳಲಿವೆ. ಒಟ್ಟು 12 ತಂಡಗಳು ಈ ಟೂರ್ನಿಯಲ್ಲಿ ಕಾದಾಟ ನಡೆಸಲಿವೆ. ಪಂದ್ಯಗಳ ದಿನಾಂಕ ಹಾಗೂ ಸ್ಥಳಗಳು ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರೊ ಕಬಡ್ಡಿಯ ಬ್ಯುಸಿನೆಸ್‌ ಹೆಡ್‌ ಅನುಪಮ್‌ ಗೋಸ್ವಾಮಿ ಬುಧವಾರ ತಿಳಿಸಿದ್ದಾರೆ.

ಕಳೆದ ಬಾರಿ ಹೈದರಾಬಾದ್‌ ಸೇರಿದಂತೆ ಕೇವಲ 3 ನಗರಗಳಲ್ಲಿ ಪಂದ್ಯಗಳು ನಡೆದಿದ್ದವು. ಈ ಬಾರಿ ಮತ್ತೆ ಕ್ಯಾರವಾನ್‌ ಮಾದರಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ಪಂದ್ಯಗಳು ಆಯೋಜನೆಗೊಳ್ಳುವ ನಿರೀಕ್ಷೆಯಿದ್ದು, ಬೆಂಗಳೂರು ಕೂಡಾ ಆತಿಥ್ಯ ವಹಿಸಬಹುದು ಎನ್ನಲಾಗುತ್ತಿದೆ. ಆಟಗಾರರ ಹರಾಜು ಕಳೆದ ಮೇ 31 ಮತ್ತು ಜೂನ್ 1ರಂದು ಮುಂಬೈನಲ್ಲಿ ನಡೆದಿತ್ತು. ಒಟ್ಟು 10 ಆಟಗಾರರು ಹರಾಜಿನಲ್ಲಿ 1 ಕೋಟಿಯ ಗಡಿಯನ್ನು ದಾಟಿ ದಾಖಲೆ ಬರೆದಿದ್ದಾರೆ.

ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.









































































































error: Content is protected !!
Scroll to Top