ಡಿ. 21 : ಶ್ರೀ ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ ದುರ್ಗ ತೆಳ್ಳಾರು – ವಾರ್ಷಿಕೋತ್ಸವ

ಕಾರ್ಕಳ : ದುರ್ಗ ತೆಳ್ಳಾರು ಶ್ರೀ ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಡಿ. 21ರಂದು ನಡೆಯಲಿದೆ. ಬೆಳಿಗ್ಗೆ 9.15ಕ್ಕೆ ಧ್ವಜಾರೋಹಣ ನಡೆಯಲಿದ್ದು, ಯು. ಕೃಷ್ಣ ಭಟ್‌ ಬಲಾಜೆ ಧ್ವಜಾರೋಹಣ ನೆರವೇರಿಸಲಿರುವರು. 10ಗಂಟೆಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮ
ಮಧ್ಯಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿರುವರು. ದುರ್ಗ ಗ್ರಾ. ಪಂ. ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದುರ್ಗ ಗ್ರಾ. ಪಂ. ಸದಸ್ಯರಾದ ಮಹೇಶ್‌ ರಾವ್‌, ಸತೀಶ್‌ ನಾಯಕ್‌, ಸಂಧ್ಯಾ ಆಚಾರ್ಯ, ಮಂಗಳೂರು ಭಾರತ್‌ ಬೀಡಿ ವರ್ಕ್ಸ್‌ ಕಾರ್ಯನಿರ್ವಾಹಕ ಮ್ಯಾನೇಜರ್‌ ಸುಬ್ರಾಯ ಎಂ. ಪೈ, ಎಂಸಿಎಫ್‌ ಜಂಟಿ ಜನರಲ್‌ ಮ್ಯಾನೇಜರ್‌ ಕೆ. ಬಿ. ಕೀರ್ತನ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್‌, ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ತಿ ಮನೋಹರ್‌, ಉದ್ಯಮಿಗಳಾದ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು, ಟಿ. ರವೀಂದ್ರ ಪೂಜಾರಿ, ಶಿರ್ಲಾಲು ಗ್ರಾ. ಪಂ. ಸದಸ್ಯ ಸುಜಿತ್‌ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರಾಜೇಶ್‌ ಶೆಟ್ಟಿ ಕುಡುಪುಲಾಜೆ, ಅಮ್ಮನ ನೆರವು ಚಾರಿಟೇಬಲ್‌ ಟ್ರಸ್ಟ್‌ನ ಅವಿನಾಶ್‌ ಶೆಟ್ಟಿ ಹಾಗೂ ವಿಶೇಷ ಆಹ್ವಾನಿತರಾಗಿ ಸಿಎ ಕಮಲಾಕ್ಷ ಕಾಮತ್‌ ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳು ಹಾಸ್ಯಮಯ ನಾಟಕ ಮದಿಮೆದ ಇಲ್ಲಡ್‌ ಪ್ರದರ್ಶನಗೊಳ್ಳಲಿದೆ.





















































error: Content is protected !!
Scroll to Top