ಚಾರ ನವೋದಯ ವಿದ್ಯಾಲಯಕ್ಕೆ 18.3 ಲಕ್ಷದ ಸ್ಕೂಲ್ ಬಸ್ ಹಸ್ತಾಂತರ

ಹೆಬ್ರಿ : ಚಾರ ನವೋದಯ ವಿದ್ಯಾಲಯದ 2022- 23ನೇ ಸಾಲಿನ ಶಾಲಾ ಪೋಷಕ ಶಿಕ್ಷಕ ಸಂಘ ಹಾಗೂ ಶಾಲೆ ಮತ್ತು ಸಂಸದರ ವಿಶೇಷ ಮುತುವರ್ಜಿಯಲ್ಲಿ ನವೋದಯ ಶಾಲೆಗೆ ಅತ್ಯಾಧುನಿಕ ಸೌಲಭ್ಯದ ಸ್ಕೂಲ್ ಬಸ್ ಕೊಡುಗೆಯಾಗಿ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ಅನುಕೂಲವಾಗಿದೆ ಎಂದು ಚಾರ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ಎನ್. ವಿ. ಡಿ. ವಿಜಯಕುಮಾರಿ ಹೇಳಿದರು.

ಅವರು ಚಾರ ಜವಾಹರ್ ನವೋದಯ ವಿದ್ಯಾಲಯಕ್ಕೆ ಸಂಸದರ ವಿಶೇಷ ಮತುವರ್ಜಿಯಲ್ಲಿ ಎಂಆರ್‌ಪಿಎಲ್ ಕೊಡಮಾಡಿದ 16 ಲಕ್ಷ ಹಾಗೂ ಶಾಲಾ ಏನ್ ವಿ. ಏನ್. ಫಂಡ್ ನಿಂದ 2ಲಕ್ಷ 30ಸಾವಿರ ಸೇರಿದಂತೆ ಒಟ್ಟು 18 ಲಕ್ಷ 30ಸಾವಿರ ಮೌಲ್ಯದ ಸ್ಕೂಲ್ ಬಸ್‌ನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಪ ಪ್ರಾಂಶುಪಾಲ ವಿ.ಕೆ. ಮನೋಹರ್ ಮಾತನಾಡಿ, ಪ್ರಾಂಶುಪಾಲೆ ವಿಜಯ್ ಕುಮಾರಿ ಅವರ ನಿರಂತರ ಪರಿಶ್ರಮದಿಂದ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 2022 -23ನೇ ಸಾಲಿನ ಶಾಲಾ ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಶಾಲಾ ವಿದ್ಯಾರ್ಥಿ ನಿಲಯಗಳಿಗೆ ಗೀಸರ್ ಅಳವಡಿಸಿ ಎಲ್ಲ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಶಾಶ್ವತವಾಗಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದೀಗ ಶಾಲೆಯ ಮತ್ತು ಸಂಸದರ ಸಹಕಾರದಿಂದ ಶಾಲೆಗೆ ಅತಿ ಅಗತ್ಯ ಇರುವ ಬಸ್ ಸೌಲಭ್ಯವನ್ನು ಕಲ್ಪಿಸುವಲ್ಲಿ ವಿಶೇಷ ಪಾತ್ರವಹಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಶಾಲಾ ಪಿಟಿಸಿ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಡಾ. ಪರಶುರಾಮ್ ಮೊದಲಾದವರು ಉಪಸ್ಥಿರಿದ್ದರು.























































































































































error: Content is protected !!
Scroll to Top