ಕಾಂತಾರದ ವರಾಹ ರೂಪಂ ಹಾಡಿಗೆ ಕೋರ್ಟ್‌ ತಡೆಯಾಜ್ಞೆ

ಥೈಕುಡಂ ಬ್ರಿಜ್‌ ಅನುಮತಿಯಿಲ್ಲದೆ ಈ ಹಾಡನ್ನು ಸಿನೇಮಾದಲ್ಲಿ ತೋರಿಸಬಾರದೆಂದು ಆದೇಶ

ಕಲ್ಲಿಕೋಟೆ : ಕಾಂತಾರ ಚಿತ್ರದ ಜೀವಾಳವಾಗಿರುವ ವರಾಹ ರೂಪಂ… ಹಾಡನ್ನು ಪ್ರಸಾರ ಮಡಬಾರದೆಂದು ಕೇರಳದ ನ್ಯಾಯಾಲಯವೊಂದು ತಡೆಯಾಜ್ಞೆ ವಿಧಿಸಿದೆ.
ಈ ಹಾಡು ತನ್ನ ನವರಸಂ ಹಾಡಿನ ನಕಲು ಎಂದು ಆರೋಪಿಸಿ ಕೇರಳದ ಥೈಕುಡಂ ಬ್ರಿಜ್‌ ಎಂಬ ಮ್ಯೂಸಿಕ್‌ ಬ್ಯಾಂಡ್‌ ತಂಡ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ವಿಚಾರಣೆಗೊಳಪಡಿಸಿರುವ ಕಲ್ಲಿಕೋಟೆ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯ ಥೈಕುಡಂ ಬ್ರಿಜ್‌ನ ಅನುಮತಿಯಿಲ್ಲದೆ ವರಾಹ ರೂಪಂ ಹಾಡನ್ನು ಪ್ರಸಾರ ಮಾಡಬಾರದೆಂದು ಕಾಂತಾರ ಚಿತ್ರತಂಡಕ್ಕೆ ಆದೇಶಿಸಿದೆ.
ಥಿಯೇಟರ್‌ಗಳು ಹಾಗೂ ಬೇರೆ ಯಾವುದೇ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಹಾಡಿನ ಪ್ರಸಾರವನ್ನು ಸ್ಥಗಿತಗೊಳಿಸಬೇಕೆಂದು ನ್ಯಾಯಾಲಯ ಚಿತ್ರತಂಡಕ್ಕೆ ಆದೇಶಿಸಿದೆ.
ನವರಸಂ ಹಾಡಿನ ಕೆಲವು ಚರಣ ಮತ್ತು ದಾಟಿಯನ್ನು ನೇರವಾಗಿ ನಕಲು ಮಡಲಾಗಿದೆ ಎಂದು ಥೈಕುಡಂ ಬ್ರಿಜ್‌ ಆರೋಪಿಸಿದೆ. ಥೈಕುಡಂ ಬ್ರಿಜ್‌ನ ಅನುಮತಿಯಿಲ್ಲದೆ ಈ ಹಾಡನ್ನು ಬಳಸಬಾರದೆಂದು ಅಮೆಜಾನ್‌, ಯೂಟ್ಯೂಬ್‌, ಜಿಯೋಸಾವನ್‌ ಮತ್ತಿತರ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ನ್ಯಾಯಾಲಯ ಆದೇಶಿಸಿದೆ.



































































































































































































































































error: Content is protected !!
Scroll to Top