ಕರೆನ್ಸಿ ನೋಟುಗಳಲ್ಲಿ ಗಣೇಶ, ಲಕ್ಷ್ಮೀ ಚಿತ್ರ

ತನ್ನ ಸಲಹೆಯನ್ನು ಅನುಷ್ಠಾನಿಸುವಂತೆ ಪ್ರಧಾನಿಗೆ ಪತ್ರ ಬರೆದ ಕೇಜ್ರಿವಾಲ್‌

ಹೊಸದಿಲ್ಲಿ : ಆರ್ಥಿಕ ಸ್ಥಿತಿ ಉತ್ತಮವಾಗಲು ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸುವ ತನ್ನ ಸಲಹೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಂಜ್ರಿವಾಲ್‌ ಬಹಳ ಗಂಭೀರವಾಗಿ ಪರಿಗಣಿಸಿರುವಂತೆ ಕಾಣಿಸುತ್ತದೆ. ಈ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗಿದ್ದರೂ ಇದೀಗ ಕೇಂಜ್ರಿವಾಲ್‌ ತನ್ನ ಸಲಹೆಯನ್ನು ಅನುಷ್ಠಾನಿಸಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಭಾರತದ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ನೋಟುಗಳ ಮೇಲೆ ದೇವರುಗಳ ಚಿತ್ರ ಮುದ್ರಿಸಬೇಕೆಂದು ಕೇಜ್ರಿವಾಲ್‌ ಬುಧವಾರ ಹೇಳಿದ್ದರು. ಕಾಂಗ್ರೆಸ್‌ ಸಹಿತ ಹಲವು ಪಕ್ಷಗಳು ಅವರ ಈ ಸಲಹೆಯನ್ನು ಲೇವಡಿ ಮಾಡಿವೆ. ಆದರೆ ಇದಕ್ಕೆಲ್ಲ ಕ್ಯಾರೇ ಎನ್ನದೇ ಕೇಂಜ್ರಿವಾಲ್‌ ಈಗ ತನ್ನ ಸಲಹೆಯನ್ನು ಗಣಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಪತ್ರ ಬರೆದಿದ್ದಾರೆ.
ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಗಾಂಧೀಜಿ ಮತ್ತು ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮೀ ಅವರ ಚಿತ್ರ ಇರಬೇಕು ಎಂದು ದೇಶದ 130 ಕೋಟಿ ಜನರು ಬಯಸುತ್ತಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ಸಲಹೆಗೆ ಅಪಾರವಾದ ಬೆಂಬಲ ವ್ಯಕ್ತವಾಗಿದೆ. ಜನರಲ್ಲಿ ಭಾರಿ ಉತ್ಸಾಹವಿದೆ ಮತ್ತು ಎಲ್ಲರೂ ಇದನ್ನು ತಕ್ಷಣವೇ ಜಾರಿಗೆ ತರಬೇಕೆಂದು ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. ಭಾರತದ ಆರ್ಥಿಕತೆಯು ಅತ್ಯಂತ ಕೆಟ್ಟ ಹಂತಕ್ಕೆ ತಲುಪಿದೆ. ಭಾರತವು 75 ವರ್ಷಗಳ ಸ್ವಾತಂತ್ರ್ಯದ ಹೊರತಾಗಿಯೂ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಒಂದೆಡೆ ದೇಶವಾಸಿಗಳೆಲ್ಲಾ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ, ಮತ್ತೊಂದೆಡೆ, ನಮ್ಮ ಪ್ರಯತ್ನಗಳು ಫಲ ನೀಡಲು ನಮಗೆ ದೇವತೆಗಳ ಆಶೀರ್ವಾದವೂ ಬೇಕು ಎಂದು ಪ್ರತಿಪಾದಿಸಿದ್ದಾರೆ. ಕೇಜ್ರಿವಾಲ್. ಅವರ ಬೇಡಿಕೆ ಬಿಜೆಪಿಯನ್ನು ಗೊಂದಲಕ್ಕೆ ಸಿಲುಕಿಸಿದೆ. ಇದು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಎಪಿಯ “ಕೊಳಕು ಹಿಂದೂ ವಿರೋಧಿ ಮುಖ” ವನ್ನು ಮರೆಮಾಚುವ ವಿಫಲ ಪ್ರಯತ್ನ ಎಂದು ಕರೆದಿದೆ.error: Content is protected !!
Scroll to Top