ಟೈಮ್‌ ಮ್ಯಾಗಸಿನ್‌ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ

ದಿಲ್ಲಿ, ಸೆ. 23: ಟೈಮ್‌ ಮ್ಯಾಗಸಿನ್‌ ಸಿದ್ಧಪಡಿಸಿರುವ 2020ನೇ ಸಾಲಿನ 100 ಪ್ರಭಾವಿ ವ್ಯಕ್ತಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಈ ಪ್ರತಿಷ್ಠಿತ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತದ ಏಕೈಕ ರಾಜಕಾರಣಿ ಮೋದಿ.

ಸೆ. 17ರಂದು 70 ಹರೆಯಕ್ಕೆ ಕಾಲಿಟ್ಟಿರುವ ಮೋದಿ 2019ರ ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಇನ್ನಷ್ಟು ಬಲಿಷ್ಠರಾಗಿದ್ದಾರೆ. ವಿಪಕ್ಷಗಳ ಕಡು ದಾಳಿಯ ಹೊರತಾಗಿಯೂ ಮೋದಿಯೇ ಈಗಲೂ ಭಾರತದಲ್ಲಿ ಜನಪ್ರಿಯ ನಾಯಕ. ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಶೆ.66 ಮಂದಿ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ ನಾಲ್ಕು ಸಲ ಟೈಮ್‌ ಮ್ಯಾಗಸಿನ್‌ ನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 2014, 2015, 2017 ಮತ್ತು 2020ರಲ್ಲಿ ಮೋದಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಮೂಡಿಬಂದಿದ್ದಾರೆ.  





































































































































error: Content is protected !!
Scroll to Top