ಮುಂಬಯಿ, ಸೆ. 23 :ನಟಿಗೆ ಲೈಂಗಿಕ ಕಿರಿಕುಳ ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಿರುಕುಳದ ಆರೋಪ ಹೊರಿಸಿರುವ ನಟಿ ಪಾಯಲ್ ಘೋಶ್ ಮಂಗಳವಾರ ರಾತ್ರಿ ತನ್ನ ವಕೀಲರ ಜೊತೆಗೆ ಹೋಗಿ ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿದ್ದಾರೆ.
2013ರಲ್ಲಿ ಯಾರಿ ರೋಡ್‌ನಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ಕಶ್ಯಪ್ ತನಗೆ ಲೈಂಗಿಕ ಕಿರಿಕುಳ ನೀಡಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಕಶ್ಯಪ್ ಅವರನ್ನು ವಿಚಾರಣೆಗಾಗಿ ಕರೆಸುವ ಸಾಧ್ಯತೆಯಿದೆ.








































