ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ- ಮೈ ಪಲ್ ದೋ ಪಲ್ ಕಾ ಶಾಯಿರ್ ಹೋ…

ಫಝಲ್ ಮೊಹಮ್ಮದ್ ಓರ್ವ ಶ್ರೀಮಂತ ವ್ಯಕ್ತಿ.ಈತನಿಗೆ ಹಲವು ಮಂದಿ ಮಡದಿಯರು.ಅಬ್ದುಲ್ ಹಯೀ ಎಂಬ ಓರ್ವ ಪುತ್ರ. ಫಝಲ್ ರ ಓರ್ವ ವೈರಿಯ ಹೆಸರು ಕೂಡಾ ಅಬ್ದುಲ್ ಹಯೀ ಆಗಿತ್ತು. ಫಝಲ್ ಮತ್ತು ಅಬ್ದುಲ್ನ ತಾಯಿಗೆ ಸದಾ ಜಗಳವಾಗುತ್ತಿತ್ತು.ಜಗಳ ಕೋರ್ಟ್ ವರೆಗೆ ಸಾಗಿತು.ಮಗನನ್ನು ಕೊಲೆ ಮಾಡಲು ತಂದೆ ಯತ್ನಿಸಿದ್ದ ಬಗ್ಗೆ ತಂದೆಯ ವಿರುದ್ಧ ದೂರು ನೀಡಲಾಯಿತು.ತಾಯಿ ತನ್ನ ಬಂಗಾರ ಮಾರಿ ಮಗನನ್ನು ರಕ್ಷಿಸಿದರು.ಇದೇ ಅಬ್ದುಲ್ಲಾ ಮುಂದೆ ಸಾಹಿರ್ ಲುಧಿಯಾನ್ವಿ ಎಂಬ ಹೆಸರಿನಲ್ಲಿ ಬಾಲಿವುಡ್ನ ಪ್ರಸಿದ್ಧ ಗೀತೆ ರಚನೆಕಾರರಾಗಿ ಗಮನ ಸೆಳೆದರು.ಪಂಜಾಬಿ ಮತ್ತು ಉರ್ದು ಭಾಷೆಗಳ ಮೇಲೆ ಚೆನ್ನಾಗಿ ಹಿಡಿತವಿತ್ತು.ಆದ್ದರಿಂದ ಇವರ ಗೀತೆಗಳೂ ಗಮನ ಸೆಳೆಯುತ್ತಿವೆ.8.3.1921ರಲ್ಲಿ‌ ಹುಟ್ಟಿದ ಇವರು  25 ಅಕ್ಟೋಬರ್ 1980 ರಲ್ಲಿ ನಿಧನ ಹೊಂದಿದರು.

ತೆರೆ  ಚೆಹ್ರೇ ಸೆ ನಝರ್ ನಹೀ ಹಟ್ ತಾ ….,ವಾದಾ ಕರೋ ನಹೀ ಚೋಡೋಗೀ…,ಮೈ ಪಲ್ ದೋ ಪಲ್ ಕಾ ಶಾಯಿರ್ ಹೋ…ಇತ್ಯಾದಿ ಅವರ ಪ್ರಸಿದ್ಧ ಚಿತ್ರಗೀತೆಗಳು.

ಏಳಿಂಜೆ ನಾಗೇಶ್ 98929 80750









































































































error: Content is protected !!
Scroll to Top