ದಿಲ್ಲಿ, ಆ.26: ಭಾರಿ ವಿರೋಧ ಇರುವ ಹೊರತಾಗಿಯೂ ಕೇಂದ್ರ ಮುಂದಿನ ತಿಂಗಳು ನೀಟ್ ಮತ್ತು ಜೆಇಇ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಬಿಜೆಪಿಯೇತರ ಸರಕಾರವಿರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.
ರಾಜ್ಯಗಳಿಗೆ ಜಿಎಸ್ ಟಿ ಪಾಲು ಹಂಚಲು ವಿಳಂಬವಾಗಿರುವ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದ ವರ್ಚುವಲ್ ಸಭೆಯಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆ ವಿಚಾರ ಚರ್ಚೆಗೆ ದಂತು. ಈ ಸಂದರ್ಭದಲ್ಲಿ ಬಿಜೆಪಿಯೇತರ ಮುಖ್ಯಮಂತ್ರಿಗಳು ಕೇಂದ್ರ ಯಾವ ವಿರೋಧವನ್ನೂ ಲೆಕ್ಕಿಸದೆ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಒಲವು ವ್ಯಕ್ತಪಡಿಸಿದರು. ಕೊರೊನಾ ಪಿಡುಗಿನ ನಡುವೆ ಪರೀಕ್ಷೆ ಜಡೆಸಿದರೆ 25 ಲಕ್ಷದಷ್ಟು ವಿದ್ಯಾರ್ಥಿಗಳನ್ನು ಅಪಾಯಕ್ಕೆ ದೂಡಿದಂತೆ ಎಂದು ವಿಪಕ್ಷಗಳು ಪ್ರತಿಪಾದಿಸುತ್ತಿವೆ.








































