ಮುಂಡ್ಕೂರು : ನಿವೃತ್ತರಿಗೆ ಸನ್ಮಾನ

0

ಕಾರ್ಕಳ : ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಸುಧೀರ್ಘ 42 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಬೋಧಕೇತರ ಸಿಬ್ಬಂದಿ ಪರಮೇಶ್ವರ ಶೆಣೈ ಮತ್ತು ಹರಿಶ್ಚಂದ್ರ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸಂಸ್ಥೆ ಸಂಚಾಲಕ ಡಾ. ಪಿ. ಬಾಲಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಠೋಬ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟೇಶ್ ಕಾಮತ್, ಆಡಳಿತ ಮಂಡಳಿ ಉಪಾಧ್ಯಕ್ಷ ಮದೋಜಿ ರಾವ್, ಕಾರ್ಯದರ್ಶಿ ಬಿ. ಪಾಂಡುರಂಗ ‌ ಪ್ರಭು, ಸದಸ್ಯ ರಘುವೀರ್ ಶೆಣೈ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸವಿತಾ ಸ್ವಾಗತಿಸಿ, ವಿದ್ಯಾರ್ಥಿಗಳಾದ ಕಾವ್ಯ, ಸೃಜನಾ, ಅಕ್ಷತಾ ಮತ್ತು ಹರ್ಷಲಾ ಪ್ರಾರ್ಥಿಸಿದರು. ಪ್ರಾಂಶುಪಾಲ ಸುದರ್ಶನ್ ವೈ. ಎಸ್. ಅಭಿನಂದನಾ ಪತ್ರ ವಾಚಿಸಿದರು. ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಾಲ್ತೇಶ್ ಇಂಗಳಕಿ ವಂದಿಸಿದರು.

Previous article25 ಲಕ್ಷ  ದಾಟಿದ ಕೊರೊನಾ  ಸೋಂಕಿತರ  ಸಂಖ್ಯೆ
Next articleಶ್ರೀ ಕೃಷ್ಣದೇವರಾಯ ವಿವಿಯಲ್ಲಿ 105 ಅತಿಥಿ ಉಪನ್ಯಾಸಕರ ಹುದ್ದೆಗಳು

LEAVE A REPLY

Please enter your comment!
Please enter your name here