25 ಲಕ್ಷ  ದಾಟಿದ ಕೊರೊನಾ  ಸೋಂಕಿತರ  ಸಂಖ್ಯೆ

ದಿಲ್ಲಿ, ಆ.  15:  ದೇಶದಲ್ಲಿ ಒಂದೇ ದಿನ 65,002 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 25 ಲಕ್ಷದ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,26,193ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 996 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಸಂಖ್ಯೆಯೂ 50,000 ಸಮೀಪಿಸಿದೆ. ಇಷ್ಟರ ತನಕ ಕೊರೊನಾ 49,036 ಮಂದಿಯನ್ನು ಬಲಿಪಡೆದುಕೊಂಡಿದೆ.

25,26,193 ಸೋಂಕಿತರ ಪೈಕಿ 18,08,937 ಮಂದಿ ಗುಣಮುಖರಾಗಿದ್ದು, 6,68,220 ಸಕ್ರಿಯ ಪ್ರಕರಣಗಳಿವೆ.

error: Content is protected !!
Scroll to Top