ಒಂದೇ ದಿನದಲ್ಲಿ 62 ಸಾವಿರ ಮಂದಿಗೆ ಕೊರೊನಾ : 22 ಲಕ್ಷ  ದಾಟಿದ  ಪ್ರಕರಣಗಳು

ದಿಲ್ಲಿ, ಆ. 10 : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 62,064 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22 ಲಕ್ಷ ಗಡಿ ದಾಟಿದೆ.

ಒಂದೇ ದಿನ ದೇಶದಾದ್ಯಂತ 62,064 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 22,15,075ಕ್ಕೆ ತಲುಪಿದೆ. ಇನ್ನು ನಿನ್ನೆ ದಾಖಲೆಯ 1,007 ಮಂದಿ ವೈರಸ್‌ನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 44,386ಕ್ಕೆ ಏರಿಕೆಯಾಗಿದೆ.

ಈ ನಡುವೆ 22,15,075 ಮಂದಿ ಸೋಂಕಿತರ ಪೈಕಿ 15,35,744 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.  6,34,945 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.error: Content is protected !!
Scroll to Top